ಸುದ್ಧಿಕನ್ನಡ ವಾರ್ತೆ
ಪಣಜಿ: ಬೆಳಗಾಗಿ ಗೋವಾ ಹೆದ್ದಾರಿಯಲ್ಲಿ ಬಾರ್ಕೋಟ್-ಜಾಲಿಕಟ್ಟಿ ನಡುವೆ ಸಂಚರಿಸುವ ಭಾರಿ ವಾಹನ ಹಾಳಾಗಿ ನಿಂತಿದ್ದು, ಈ ಮಾರ್ಗದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ಗಂಟೆಗಳ ಕಾಲ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಾಹನ ತೆರವುಗೊಳಿಸದ ಕಾರಣ ಈ ಮಾರ್ಗದಲ್ಲಿ ಓಡಾಟ ನಡೆಸುವ ಇತರ ವಾಹನ ಸವಾರರು ಪರದಾಡುವಂತಾಯಿತು.

ಈ ಮಾರ್ಗದಲ್ಲಿ ಹೆಚ್ಚಿನ ಭಾಗ ರಸ್ತೆ ಹದಗೆಟ್ಟಿರುವುದರಿಂದ ಈ ಮಾರ್ಗದಲ್ಲಿ ಓಡಾಟ ನಡೆಸುವುದೇ ದುಸ್ಥರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪದೆ ಪದೆ ಈ ಮಾರ್ಗದಲ್ಲಿ ಒಂದಿಲ್ಲೊಂದು ಘಟನೆ ನಡೆಯುತ್ತಿರುವುದು ವಾಹನ ಸವಾರರು ಪರದಾಡುವಂತಾಗಿದೆ.