ಸುದ್ದಿ ಕನ್ನಡ ವಾರ್ತೆ
ಶಿರಸಿ: ಜಿಂಕೆ ಭೇಟಿ ಮಾಡಿದ ಮೂವರು ಕಾಡುಪ್ರಾಣಿ ಬೇಟೆಗಾರರ ಪೈಕಿ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಂಧಿಸಿದ್ದಾರೆ.
ಅಧಿಕಾರಿಗಳು ಕಾರ್ಯಾಚರಣೆ ವೇಳೆ ಜಿಂಕೆಯ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.
ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮದ ಹಳೆಯ ಪಕ್ಕ ನಡೆದ ಘಟನೆ ಇದಾಗಿದೆ.
ಆರೋಪಿ ಗಣಪತಿ ಗೌಡ ಎಂಬತನನ್ನು ಬಂಧಿಸಲಾಗಿದ್ದು ಇನ್ನುಳಿದ ಆರೋಪಿಗಳಾದ ವೆಂಕಟೇಶ್ ನಾಯಕ ಹಾಗೂ ಗಣೇಶ್ ನಾಯಕ್ ಎಂಬ ಆರೋಪಿಗಳು ತಲೆಮರಸಿಗೊಂಡಿದ್ದಾರೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ ಆರ್ ಹಾಗೂ ಉಪ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎಸ್ ಎಸ್ ನಿಂಗಾಣಿ ರವರ ಮಾರ್ಗದರ್ಶನದಲ್ಲಿ ಇತರ ಅಧಿಕಾರಿಗಳು ಹೆಚ್ಚಿನ ತನಿಖಾ ಕಾರ್ಯ ಕೈಗೊಂಡಿದ್ದಾರೆ.