ಸುದ್ಧಿಕನ್ನಡ ವಾರ್ತೆ
Goa (Panaji): ಸಿಬಿಐ ಅಧಿಕಾರಿಗಳು ಗೋವಾ ರಾಜಧಾನಿ ಪಣಜಿಯಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿ ಆದಾಯ ಇಲಾಖೆ ಅಧಿಕಾರಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂಧಿಸಿದ ಘಟನೆ ಪಾಟೊ ಪಣಜಿಯಲ್ಲಿ ನಡೆದಿದೆ.
ಸಿಬಿಐ ಅಧಿಕಾರಿಗಳು ಪಣಜಿ ಪಾಟೊದಲ್ಲಿ ಕಪ್ಪು ಬಣ್ಣದ ಕಾರೊಂದನ್ನು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆದಾಯ ತೆರಿಗೆ ಅಧಿಕಾರಿ ಅತುಲ್ ವಾಣಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಬಿಐ ಅಧಿಕಾರಿಗಳು ಅತುಲ್ ವಾಣಿ ರವರನ್ನು ವಷಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ.
ಕಂಪನಿಯೊಂದರ ಬಿಲ್ ನ್ನು ತಡೆಹಿಡಿದು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅತುಲ್ ವಾಣಿ ರವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ.