ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಗೋವಾ ಸರ್ಕಾರ ಕೈಗೆತ್ತಿಕೊಂಡಿದೆ. ಈಗಾಗಲೇ ಹಂತ ಹಂತವಾಗಿ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಗೋವಾದ ಮಾಪ್ಸಾದ ಪೊರಬೊವಾಡಾ, ಕಲಂಗುಟ್ ನಲ್ಲಿ ನಿರ್ಮಿಸಲಾಗಿದ್ದ 20 ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿದೆ. ಪೋಲಿಸ್ ಬಿಗಿ ಭಧ್ರತೆಯಲ್ಲಿ ಮನೆಗಳ ತೆರವು ಕಾರ್ಯ ಕೈಗೊಳ್ಳಲಾಗಿದೆ. ಈ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಬಾರ್ದೇಸ ನಗರಾಭಿವೃದ್ಧಿ ಅಧಿಕಾರಿಗಳು, ಕಲಂಗುಟ್ ಗ್ರಾಮ ಪಂಚಾಯತ ಅಧಿಕಾರಿ ಅರ್ಜುನ್ ವೇಳಿಪ್, ಸೇರಿದಂತೆ ವಿವಿಧ ಇಲಾಖೆಗಳಿಂದ ಈ ಮನೆಗಳ ತೆರವಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು.
ಅಂತೆಯೇ ಖಡಪಾವಾಡಾ-ಕುಚೇಲಿಯಲ್ಲಿ ಸರ್ಕಾರದ ಜಾಗದಲ್ಲಿ ಅತಿಕ್ರಮಣ ಮಾಡಿದ್ದ 36 ಮನೆಗಳನ್ನು ಕೂಡ ಕಳೆದ ಸೋಮವಾರ ತೆರವುಗೊಳಿಸಲಾಗಿತ್ತು.