ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಯಲ್ಲಾಪುರ ತಾಲೂಕಿನ ಮಲವಳ್ಳಿಯಲ್ಲಿ ಜನವರಿ 18 ಮತ್ತು 20 ರಂದು ಮಕರಸಂಕ್ರಮಣ ಜಾತ್ರೆಯ ಪ್ರಯುಕ್ತ ಮಲವಳ್ಳಿಯ ಶ್ರೀ ರಾಮಲೀಲಾ ಬಯಲು ರಂಗ ಮಂಟಪದಲ್ಲಿ ಎರಡೂ ದಿನ ಇಡೀ ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿಯಲ್ಲಿ ನಡೆಯುವ ನಾಟಕಕ್ಕೆ ಸುಮಾರು 70 ವರ್ಷಗಳ ಇತಿಹಾಸವಿದೆ. ಹಳೇಯ ಸಂಪ್ರದಾಯದಂತೆ ಇಂದಿನ ಹೊಸ ಯುವ ಪೀಳಿಗೆಯವರೂ ಕೂಡ ಈ ನಾಟಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.

ಜನವರಿ 18 ರಂದು ಎರಡು ನಾಟಕ ಮತ್ತು ಜನವರಿ 20 ರಂದು ಎರಡು ನಾಟಕ ಪ್ರದರ್ಶನ ನಡೆಯಲಿದೆ. ರಾತ್ರಿ 9.30 ಕ್ಕೆ ನಾಟಕ ಪ್ರದರ್ಶನ ಆರಂಭಗೊಳ್ಳಲಿದ್ದು ಒಟ್ಟೂ 4 ನಾಟಕ ಪ್ರದರ್ಶನ ನಡೆಯಲಿದೆ.

ಈ ಎಲ್ಲ ನಾಟಕ ಪ್ರದರ್ಶನ ವೀಕ್ಷಣೆಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.