ಸುದ್ಧಿಕನ್ನಡ ವಾರ್ತೆ
OLD GOA: ಓಲ್ಡ ಗೋವಾದಲ್ಲಿ ನಡೆಯಲಿರುವ ಸಂತ ಫ್ರಾನ್ಸಿಸ್ ಜೇವಿಯರ್ ಅವರ 17ನೇ ಶವದರ್ಶನ ಕಾರ್ಯಕ್ರಮಕ್ಜೆ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮಕ್ಕೆ ವಿವಿಧ ದೇಶಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಲಿದ್ದಾರೆ. ಇಲ್ಲಿನ ಕಾಮಗಾರಿಯನ್ನು ಸಂಘಟನಾ ಸಮಿತಿಯವರು ಪ್ರತಿದಿನ ಪರಿಶೀಲಿಸುತ್ತಿದ್ದಾರೆ. ಈ ಭವ್ಯ ಸಮಾರಂಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 1500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಗೋವಾದ ಪೊಲೀಸ್ ಮಹಾನಿರ್ದೇಶಕರು ಮತ್ತು ಕಾರ್ಯಕ್ರಮದ ಸಂಘಟನಾ ಸಮಿತಿ ನಡೆಸಿದ ಸಭೆಯಲ್ಲಿ ಒಟ್ಟಾರೆ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು.
ನವೆಂಬರ್ 18 ರಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಚರ್ಚ್ ಪ್ರದೇಶಕ್ಕೆ ಭೇಟಿ ನೀಡಿ ವಿವರವಾಗಿ ಅವಲೋಕಿಸಲಿದ್ದಾರೆ ಎಂದು ಸಂಘಟನಾ ಸಮಿತಿಯ ಸದಸ್ಯ ಫಾದರ್ ಹೆನ್ರಿ ಫಾಲ್ಕಾವೊ ಮಾಹಿತಿ ನೀಡಿದ್ದಾರೆ.
ಗೋವಾ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಚರ್ಚ್ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿನ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿ ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಮಾಹಿತಿ ಪ್ರಕಾರ, ಉದ್ಘಾಟನಾ ಸಮಾರಂಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುಖ್ಯ ಪೆವಿಲಿಯನ್‍ನಲ್ಲಿ 1000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇದರೊಂದಿಗೆ ಟ್ರಾಫಿಕ್ ಮತ್ತು ಪಾಕಿರ್ಂಗ್ ಪ್ರದೇಶದಲ್ಲಿ ಪೊಲೀಸ್ ಉಪಸ್ಥಿತಿ ಇರುತ್ತದೆ. ಒಟ್ಟು 1500 ಪೊಲೀಸ್ ಸಿಬ್ಬಂದಿ ಸಮಾರಂಭದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಚರ್ಚ ಸಮೀತಿಯ ಸದಸ್ಯರು ಹಾಗೂ ಸಂಘಟನಾ ಸಮಿತಿಯವರು ಭದ್ರತೆ ದೃಷ್ಟಿಯಿಂದ ಕೈಗೊಂಡಿರುವ ಕ್ರಮಗಳನ್ನು ಹಾಗೂ ಪೊಲೀಸ್ ಸಿಬ್ಬಂದಿಗೆ ಭಕ್ತರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು. ಅಂದಾಜಿನ ಪ್ರಕಾರ, ಪ್ರತಿದಿನ 10,000 ಭಕ್ತರು ಸಂತ್ ಫ್ರಾನ್ಸಿಸ್ ಜೇವಿಯರ್ ಅವರ ಶವ ದರ್ಶನ ಪಡೆಯಲು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
10 ವರ್ಷಕ್ಕೊಮ್ಮೆ ನಡೆಯುವ ಈ ಅದ್ಧೂರಿ ಕಾರ್ಯಕ್ರಮದ ಉದ್ಘಾಟನೆಗೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿವೆ. ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿ ಮತ್ತು ಸಿದ್ಧತೆಗಳನ್ನು ಪರಿಶೀಲಿಸಲು ಚರ್ಚ್ ಮತ್ತು ಸಂಘಟನಾ ಸಮಿತಿ ಸಭೆಗಳನ್ನು ಪ್ರತಿದಿನ ನಡೆಸಲಾಗುತ್ತದೆ. ಸಂಘಟನಾ ಸಮಿತಿಯ ಸಮನ್ವಯ ಅಧಿಕಾರಿ ಸಂದೀಪ್ ಜಾಕಿಸ್ ನಾಳೆ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಸಿದ್ದತೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಚರ್ಚ್ ಹಾಗೂ ಸಂಘಟನಾ ಸಮಿತಿಯೊಂದಿಗೆ ನ.18ರಂದು ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಫಾದರ್ ಹೆನ್ರಿ ಫಾಲ್ಕಾವೊ ಮಾಹಿತಿ ನೀಡಿದ್ದಾರೆ.