ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ಪ್ರವಾಸೋದ್ಯಮ ಕುಸಿಯುತ್ತಿದೆ ಎಂದು ಪ್ರತಿಪಾದಿಸಲು ಸುಳ್ಳು ಅಂಕಿಅಂಶಗಳನ್ನು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ ಗೋವಾ ರಾಜ್ಯ ಸರ್ಕಾರವು ರಾಮಾನುಜ ಮುಖರ್ಜಿ ಎಂಬುವರ ವಿರುದ್ಧ ಗೋವಾದಲ್ಲಿ ಪೋಲಿಸ್ ದೂರು ದಾಖಲಾಗಿದೆ.
ಗೋವಾದಲ್ಲಿ ಪ್ರವಾಸೋದ್ಯಮ ಕುಸಿಯುತ್ತಿದೆ ಎಂದು 2019 ಮತ್ತು 2023 ರ ನಡುವಿನ ಅಂಕಿ ಅಂಶಗಳ ನಡುವಿನ ಹೋಲಿಕೆಯನ್ನು ಉಲ್ಲೇಖಿಸಿ ರಾಮಾನುಜ ಮುಖರ್ಜಿ ರವರು ತಮ್ಮ ಟ್ವೀಟರ್ ಖಾತೆಯಲ್ಲಿ ನವೆಂಬರ್ 5 ರಂದು ಪೋಸ್ಟ ಮಾಡಿದ್ದರು. ಮುಖರ್ಜಿ ರವರು ಸುಳ್ಳು ದತ್ತಾಂಶವನ್ನು ಇಟ್ಟುಕೊಂಡು ಗೋವಾದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗೋವಾ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಕ್ರೈಂ ಬ್ರ್ಯಾಂಚ್ ಗೆ ದೂರು ಸಲ್ಲಿಸಿದ್ದಾರೆ.