ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಇಂಟರ್ ನೆಟ್ 4 ಜಿ ಸೌಲಭ್ಯ ಕಲ್ಪಿಸುವ ಉದ್ದೇಸದಿಂದ ಜಿಲ್ಲೆಯಲ್ಲಿ ನೂರಾರು ಬಿಎಸ್ ಎನ್ ಎಲ್ ಟವರ್ ಗಳು ಮಂಜೂರಾಗಿದೆ. ಅಂತೆಯೇ ಯಲ್ಲಾಪುರ ಮಾವಿನಮನೆ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮಲವಳ್ಳಿಯಲ್ಲಿ BSNL 4 G ಸೇವೆ ಇನ್ನು ಒಂದೇ ವಾರದೊಳಗಾಗಿ ಆರಂಭಗೊಳ್ಳಲಿದೆ.
ಮಲವಳ್ಳಿಯಲ್ಲಿ BSNL ಟವರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಅಂಟೇನಾ ಅಳವಡಿಕೆ ಕಾರ್ಯ ಆರಂಭಗೊಂಡಿದೆ. ಮಲವಳ್ಳಿಯಲ್ಲಿ ಬಿಎಸ್ ಎನ್ ಎಲ್ 4 ಜಿ ಆರಂಭಗೊಂಡರೆ ಸುತ್ತಮುತ್ತಲಿನ ಊರುಗಳಿಗೂ ಈ ನೆಟ್ ವರ್ಷ ಸೌಲಭ್ಯ ಲಭಿಸಲಿದೆ. ಇಷ್ಟು ದಿನ ನೆಟ್ ವರ್ಕ ಸಿಗದೆಯೇ ಪರದಾಡುತ್ತಿದ್ದ ಜನರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.
ಮಾವಿನಮನೆ ಪಂಚಾಯತ ವ್ಯಾಪ್ತಿಯಲ್ಲಿ ಬಿಎಸ್ ಎನ್ ಎಲ್ ನ ಒಟ್ಟೂ 4 ಟವರ್ ಗಳು ಶೀಘ್ರದಲ್ಲಿಯೇ ಕಾರ್ಯಾರಂಭಗೊಳ್ಳಲಿದೆ. ಈಭಾಗದ ವಿವಿದೆಡೆ ಟವರ್ ನಿರ್ಮಾಣಕಾರ್ಯ ಆರಂಭಗೊಂಡಿರುವುದಕ್ಕೆ ಈ ಭಾಗದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.