ಸುದ್ಧಿಕನ್ನಡ ವಾರ್ತೆ
Goa: ಗೋವಾದ ಕಲಂಗುಟ್‍ನಲ್ಲಿ ಗುಣಮಟ್ಟವಿಲ್ಲದ ಗೋಡಂಬಿ ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳ ಮೇಲೆ ಆಹಾರ ಮತ್ತು ಔಷಧ ಆಡಳಿತವು ದಾಳಿ ನಡೆಸಿ ಸೀಲ್ ಮಾಡಿದೆ.
ಗೋಡಂಬಿ ಬೀಜಗಳನ್ನು ಪರಿಶೀಲಿಸಿದಾಗ, ಪರ್ವೀನ್ ಬಿಷ್ಣೋಯಿ ಅವರ ದ್ವಾರಕಾಧೀಶ್ ಕಾಜು, ಸೋಹನ್ ಲಾಲ್ ಅವರ ಗುಜರಾತಿ ಕಾಜುವಾಲಾ ಮತ್ತು ಅವಿನಾಶ್ ಪೊವಾರ್ ಅವರ ಶ್ರೀ ರಾಮ್ ಎಂಟರ್‍ಪ್ರೈಸಸ್ ಎಂಬ ಮೂರು ಅಂಗಡಿಗಳಲ್ಲಿ ಗುಣಮಟ್ಟವಿಲ್ಲದ ಗೋಡಂಬಿ ಬೀಜಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿವೆ.
ಈ ಹಿನ್ನೆಲೆಯಲ್ಲಿ ಆಹಾರ ಮತ್ತು ಔಷಧ ಆಡಳಿತದ ಅಧಿಕಾರಿಗಳು ಈ ಅಂಗಡಿಗಳನ್ನು ನಿಬರ್ಂಧಿಸಿ, ಅಂಗಡಿಗಳ ಕಾರ್ಯಾಚರಣೆಯನ್ನು ಮುಚ್ಚುವಂತೆ ಸೂಚಿಸಿದರು. ಅಲ್ಲದೆ ಈ ಅಂಗಡಿಗಳವರ ವಿರುದ್ದ ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣ ದಾಖಲಿಸಿರುತ್ತಾರೆ. ಆಡಳಿತ ನಿರ್ದೇಶಕಿ ಶ್ವೇತಾ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಅಧಿಕಾರಿ ರಿಚರ್ಡ್ ನೊರೊನ್ಹಾ, ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ರಾಜಾರಾಮ್ ಪಾಟೀಲ್, ಭಕ್ತಿ ವಾಲ್ಕೆ, ಪ್ರದೀಕ್ಷಾ ಚೋಪ್ಡೇಕರ್ ಮತ್ತು ಸಹೋದ್ಯೋಗಿಗಳು ಈ ಕ್ರಮ ಕೈಗೊಂಡಿದ್ದಾರೆ.