ಸುದ್ಧಿಕನ್ನಡ ವಾರ್ತೆ
Goa(Dabolim): ಭಾರತದ ಅಧ್ಯಕ್ಷರಾದ ದ್ರೌಪದಿ ಮುರ್ಮು ರವರು ಗೋವಾಕ್ಕೆ ಆಗಮಿಸಿದ್ದು ಶುಕ್ರವಾರ ಗೋವಾದ ವಾಸ್ಕೊದಲ್ಲಿ ಸ್ವದೇಶಿ ವಿಮಾನವಾಹಕ ನೌಕೆ ಐಎನ್ ಎಸ್ ವಿಕ್ರಾಂತ್ ಗೆ ಚಾಲನೆ ನೀಡಿದರು.

ರಾಷ್ಟ್ರಪತಿಗಳು ಮಿಗ್ 29ಕೆ ಟೇಕ್ ಅಪ್ ಮತ್ತು ಲ್ಯಾಂಡಿಗ್, ಯುದ್ಧನೌಕೆಯಿಂದ ಕ್ಷಿಪಣಿ ಫೈರಿಂಗ್ ಡ್ರಿಲ್ ಗಳು ಮತ್ತು ಗೋವಾ ಕರಾವಳಿಯ ಅರೇಬಿಯನ್ ಸಮುದ್ರದಲ್ಲಿ ಜಲಾಂತರ್ಗಾಮಿ ಕಾರ್ಯಾಚರಣೆ ಸೇರಿದಂತೆ ಹಲವಾರು ನೌಕಾ ಕಾರ್ಯಾಚರಣೆಗೆ ಸಾಕ್ಷಿಯಾದರು.

ರಾಷ್ಟ್ರಪತಿಗಳು ಐಎನ್ ಎಸ್ ವಿಕ್ರಾಂತ್ ನ ಸಿಬ್ಬಂಧಿಯೊಂದಿಗೆ ಸಂವಾದ ನಡೆಸಿದರು. ಇದರಲ್ಲಿ ಮೊದಲ ಬ್ಯಾಚ್ ಮಹಿಳಾ ಸಗ್ನಿವೀರ್ ಗಳು ಪಾಲ್ಗೊಂಡಿದರು.