ಸುದ್ಧಿಕನ್ನಡ ವಾರ್ತೆ
ಗೋವಾ (ಮಡಗಾಂವ): ಗೋವಾದಲ್ಲಿ ಪ್ರವಾಸಿಗರು ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ದಂಡ ವಿಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಗೋವಾ ಮಡಗಾಂವ ನಗರಪಾಲಿಕೆ ಮುಂದಾಗಿದೆ. ಬಯಲು ಪ್ರದೇಶದಲ್ಲಿ ಶೌಚಕ್ಕೆ ತೆರಳಿದರೆ 100 ರೂ ದಂಡ ಹಾಗೂ ಮೂತ್ರ ವಿಸರ್ಜನೆ ಮಾಡಿದರೆ 50 ರೂ ದಂಡ ವಿಧಿಸಬೇಕಾಗಲಿದೆ.

ಮಡಗಾಂವ ಪಾಲಿಕೆ ಪರಿಸರದಲ್ಲಿ ಪ್ರವಾಸಿಗರು ಬಯಲು ಪ್ರದೇಶದಲ್ಲಿ ಶೌಚಕ್ಕೆ ತೆರಳುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಪಾಲಿಕೆಯು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ಧೇಶದಿಂದ ಪಾಲಿಕೆಯು ಬಯಲು ಶೌಚಕ್ಕೆ ತೆರಳುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಮಡಗಾಂವ ಪಾಲಿಕೆಯ ಮುಖ್ಯಾಧಿಕಾರಿ ಮೆಲವಿನ್ ವಾಜ್ ರವರು ಈ ಕುರಿತು ನೋಟಿಸ್ ಜಾರಿಗೊಳಿಸಿದ್ದಾರೆ. ಬಯಲು ಶೌಚಕ್ಕೆ ತೆರಳಿದರೆ ಮೊದಲಿಗೆ 100 ರೂ ದಂಡ ಮತ್ತೆ ಮತ್ತೆ ಇದೇ ರೀತಿ ತಪ್ಪು ಮಾಡಿದರೆ ದಂಡದ ರಖಂ ಹೆಚ್ಚಳ ಮಾಡುವುದಾಗಿಯೂ ನೋಟಿಸ್ ನಲ್ಲಿ ಹೇಳಲಾಗಿದೆ.