ಸುದ್ಧಿಕನ್ನಡ ವಾರ್ತೆ
ಪಣಜಿ: ಪರ್ವರಿಯಿಂದ ಸುಕೂರ್ ಜಂಕ್ಷನ್ ವರೆಗೆ ನಿರ್ಮಾಣಗೊಳ್ಳುತ್ತಿರುವ ಪ್ಲೈಓವರ್ ಕಾಮಗಾರಿ ಬಹುವೇಗವಾಗಿ ಸಾಗಿದೆ.

 

ಈ ಫ್ಲೈಓವರ್ ನಿರ್ಮಾಣಕ್ಕೆ ಗೋವಾ ಸರ್ಕಾರ 386 ಕೋಟಿ ರೂಗಳನ್ನು ಖರ್ಚು ಮಾಡಲಿದೆ. ಒಟ್ಟೂ 86 ಫಿಲ್ಲರ್ ಗಳ ಮೇಲೆ ಈ ಫ್ಲೈಓವರ್ ನಿರ್ಮಾಣಗೊಳ್ಳಲಿದ್ದು, ಈ ಪೈಕಿ 12 ಫಿಲ್ಲರ್ ಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಈ ಫ್ಲೈ ಓವರ್ ಗೆ 1431 ಕಾಂಕ್ರೀಟ್ ಬ್ಲಾಕ್ ಗಳನ್ನು ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಫ್ಲೈಓವರ್ ನಿರ್ಮಾಣದಿಂದ ಪರ್ವರಿ ಭಾಗದಲ್ಲಿ ಉಂಟಾಗುತ್ತಿದ್ದ ಭಾರಿ ವಾಹನ ದಟ್ಟಣೆಗೆ ಪರಿಹಾರ ಲಭಿಸಲಿದೆ. ಸದ್ಯ ಫ್ಲೈ ಓವರ್ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಇಲ್ಲಿ ವಾಹನ ಸಂಚಾರಕ್ಕೆ ಅಡಚಣಿ ಉಂಟಾಗುತ್ತಿದೆ. ಕಚ್ಚಾ ರಸ್ತೆಯಲ್ಲಿ ವಾಹ ಓಡಾಟ ನಡೆಸಲಾಗುತ್ತಿರುವುದರಿಂದ ರಸ್ತೆಯಲ್ಲಿರುವ ಹೊಂಡದಿಂದಾಗಿ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ.