ಸುದ್ಧಿಕನ್ನಡ ವಾರ್ತೆ
Goa(ವಾಸ್ಕೊ): ಗೋವಾದ ವಾಸ್ಕೊ ಜುವಾರಿನಗರದ ಶ್ರೀ ಯಲ್ಲಾಲಿಂಗೇಶ್ವರ ಮಠದ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ರಾಜ್ಯೋತ್ಸವ ಗೋವಾ ಸಂಘಟನಾಧ್ಯಕ್ಷ ರಾಜೇಶ್ ಶೆಟ್ಟಿ ರವರು 1,25,000 ರೂಗಳನ್ನು ದೇಣಿಗೆ ನೀಡುವ ಮೂಲಕ ಶ್ರೀಮಠದ ಸೇವೆಗೆ ಪಾತ್ರರಾಗಿದ್ದಾರೆ.

ರಾಜೇಶ್ ಶೆಟ್ಟಿ ರವರು ಶನಿವಾರ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಶ್ರೀಮಠದ ಅರ್ಚಕರಾದ ಕಂಬಳಯ್ಯ ಮಹಾರಾಜರಿಗೆ ಈ ದೇಣಿಗೆ ಹಣದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಸಾಪ ಗೋವಾ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮೀತಿಯ ಗೌರವಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ, ಮತ್ತಿತರರು ಉಪಸ್ಥಿತರಿದ್ದರು.

ರಾಜೇಶ್ ಶೆಟ್ಟಿ ರವರು ಕಳೆದ ಕೆಲ ದಿನಗಳ ಹಿಂದೆ ಶ್ರೀಮಠದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡುವುದಾಗಿ ಮಾತು ಕೊಟ್ಟಿದ್ದರು. ಇದೀಗ ಅವರು ಕೊಟ್ಟ ಮಾತಿನಂತೆಯೇ ಶ್ರೀಮಠಕ್ಕೆ ದೇಣಿಗೆ ನೀಡಿ ಶ್ರೀಮಠದ ಸೇವೆಗೆ ಪಾತ್ರರಾಗಿದ್ದಾರೆ.