ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕಲಂಗುಟ್ ಬೀಚ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ವಿವಾದ ಹಿಂಸಾಚಾರಕ್ಕೆ ತಿರುಗಿದೆ. ಇದರಲ್ಲಿ ಇಬ್ಬರು ಸ್ಥಳೀಯ ಟ್ಯಾಕ್ಸಿ ಚಾಲಕರು ಪುಣೆಯ ಪ್ರವಾಸಿಗರನ್ನು ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರವಾಸಿಗರ ದೂರಿನ ಮೇರೆಗೆ ಟ್ಯಾಕ್ಸಿ ಚಾಲಕ ಪೀಟರ್ ಫಿಲಿಪ್ ನೊರೊನ್ಹಾ ನನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಟ್ಯಾಕ್ಸಿ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಬೆಳಕಿಗೆ ಬಂದಿರುವ ಮಾಹಿತಿಯ ಪ್ರಕಾರ, ಈ ಘಟನೆ ನಿನ್ನೆ ಅಕ್ಟೋಬರ್ 31 ರಂದು ರಾತ್ರಿ 9 ಗಂಟೆಗೆ ನಡೆದಿದೆ. ದೀಪಾವಳಿ ಪ್ರವಾಸಕ್ಕೆಂದು ಗೋವಾಕ್ಕೆ ಬಂದಿದ್ದ ನಾಜಿಯಾ ಶೇಖ್ ಅವರ ಕುಟುಂಬ ಕಲಂಗುಟ್‍ನ ಸೇಂಟ್ ಆಂಥೋನಿ ಚಾಪೆಲ್ ಬಳಿಯ ಪಾಕಿರ್ಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿತ್ತು. ಈ ವೇಳೆ ಇಲ್ಲಿಗೆ ಬಂದ ಇಬ್ಬರು ಸ್ಥಳೀಯ ಟ್ಯಾಕ್ಸಿ ಚಾಲಕರು ಆತನೊಂದಿಗೆ ಜಗಳವಾಡಿದ್ದಾರೆ. ಪ್ರವಾಸಿಗರನ್ನು ನಿಂದಿಸಲಾಗಿದೆ. ನಂತರ ಇದು ಜಗಳಕ್ಕೆ ಕಾರಣವಾಯಿತು. ಇದೇ ವೇಳೆ ಶಂಕಿತರು ಫಿರ್ಯಾದಿ ಮಹಿಳೆ ಹಾಗೂ ಆಕೆಯ ಕುಟುಂಬದವರಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ಪ್ರವಾಸಿಗರು ಕಲಂಗುಟ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಪೊಲೀಸರು ಶಂಕಿತ ಕಾರನ್ನು ಶೋಧಿಸಿ, ಬೆಳಿಗ್ಗೆ ಮನೆಗೆ ಹಿಂದಿರುಗುತ್ತಿದ್ದಾಗ ಪೀಟರ್ ಫಿಲಿಪ್ ನೊರೊನ್ಹಾ ಅವರನ್ನು ಬಂಧಿಸಿದ್ದಾರೆ. ಅದೇ ಸಮಯದಲ್ಲಿ ಎರಡನೇ ಶಂಕಿತನ ಹುಡುಕಾಟ ನಡೆಸಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ಪರೇಶ್ ನಾಯ್ಕ್ ತಿಳಿಸಿದ್ದಾರೆ.
ಘಟನೆ ವೇಳೆ ಶಂಕಿತ ಆರೋಪಿ ಪಾನಮತ್ತನಾಗಿದ್ದ ಎಂದು ಸಂತ್ರಸ್ತೆಯ ಕುಟುಂಬದವರು ಹೇಳಿದ್ದಾರೆ. ‘ನಾವು ಊಟಕ್ಕೆ ಹೋಗುತ್ತಿದ್ದೆವು. ನಮ್ಮ ಕಾರಿನ ಮುಂದೆ ಕಾರೊಂದು ನಿಂತಿತ್ತು. ಆದ್ದರಿಂದ ಸಂಬಂಧಪಟ್ಟ ಟ್ಯಾಕ್ಸಿ ಚಾಲಕ ತನ್ನ ಕಾರನ್ನು ಸ್ವಲ್ಪ ಪಕ್ಕಕ್ಕೆ ಸರಿಸಲು ವಿನಂತಿಸಿದೆ. ಆದರೆ ಟ್ಯಾಕ್ಸಿ ಚಾಲಕ ಓಡಿ ಬಂದು ತನ್ನ ಮತ್ತು ಆಕೆಯ ಕುಟುಂಬ ಸದಸ್ಯರನ್ನು ನಿಂದಿಸಿದ್ದಾನೆ ಎಂದು ನಾಜಿಯಾ ಶೇಖ್ ಹೇಳಿದ್ದಾರೆ.
ಇದಾದ ನಂತರ ಮತ್ತೊಬ್ಬ ಶಂಕಿತ ಟ್ಯಾಕ್ಸಿ ಚಾಲಕ ಶಂಕಿತನ ಸಹಾಯಕ್ಕೆ ಬಂದನು ಮತ್ತು ಇಬ್ಬರೂ ಒಟ್ಟಾಗಿ ಪ್ರವಾಸಿ ಕುಟುಂಬವನ್ನು ಥಳಿಸಲು ಪ್ರಾರಂಭಿಸಿದರು. ಮಹಿಳೆಯರನ್ನೂ ಥಳಿಸಿ ನಿಂದಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಸುಮಾರು ಹತ್ತು ನಿಮಿಷಗಳ ಕಾಲ ನಡೆಯಿತು. ಅವರ ಕುಟುಂಬ ಸದಸ್ಯರು ತಮ್ಮ ಮೊಬೈಲ್ ಫೋನ್‍ಗಳಲ್ಲಿ ಘಟನೆಯ ವೀಡಿಯೊವನ್ನು ಚಿತ್ರೀಕರಿಸಲು ಪ್ರಾರಂಭಿಸುವುದನ್ನು ನೋಡಿದ ನಂತರ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಶೇಖ್ ಹೇಳಿದ್ದಾರೆ.

ಗೋವಾ ಪೊಲೀಸರು ಮತ್ತು ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು. ಏಕೆಂದರೆ ಇನ್ನು ಮುಂದೆ ಇಂತಹ ಘಟನೆಗಳು ಪ್ರವಾಸಿಗರಿಗೆ ಆಗಬಾರದು. ಪ್ರವಾಸಿಗರಿಗೆ ಭದ್ರತೆ ಒದಗಿಸುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಪುಣೆ ಅಥವಾ ಮಹಾರಾಷ್ಟ್ರ ಹಾಗೂ ದೇಶದ ಇತರ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಬರುತ್ತಾರೆ. ಅವರು ಗೋವಾದಲ್ಲಿ ಸುರಕ್ಷಿತವಾಗಿರಬೇಕು’ ಎಂದು ಈ ಕುಟುಂಬ ಆಗ್ರಹಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆಂದು ಗೋವಾಕ್ಕೆ ಬಂದಿದ್ದ ಈ ಕುಟುಂಬಕ್ಕೆ ಕಹಿ ಅನುಭವ ಎದುರಾಗಿದೆ. ಅಲ್ಲದೇ ಘಟನೆಯಿಂದ ಪ್ರವಾಸಿಗರ ಸುರಕ್ಷತೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.