ಸುದ್ಧಿಕನ್ನಡ ವಾರ್ತೆ
ನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಪಟಾಕಿಗೆ ಬೆಂಕಿ ಹಚ್ಚಿದ ಕರುಣಾಹೀನತೆ ಮೆರೆದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಆಘ್ರಹ ವ್ಯಕ್ತವಾಗುತ್ತಿದೆ. ಮೂಕ ಪ್ರಾಣಿಯನ್ನು ಹಿಂಸಿಸಿದ ಬಗ್ಗೆ ಕೂಡ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವ್ಯಕ್ತಿಯ ಗುರುತು ಪತ್ತೆ ಹಚ್ಚಿ ಮೂಕ ಪ್ರಾಣಿಗೆ ಹಿಂಸಿಸಿದ ಈತನಿಗೆ ಶಿಕ್ಷೆ ವಿಧಿಸುವಂತೆ ಆಘ್ರಹ ವ್ಯಕ್ತವಾಗುತ್ತಿದೆ.