ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಅಕ್ಟೋಬರ್ 30 ,31 ಮತ್ತು 1 ರಂದು ಭಾರಿ ಮಳೆಯಾಗಲಿರುವ ಮುನ್ಸೂಚನೆಯನ್ನು ಗೋವಾ ರಾಜ್ಯ ಹವಾಮಾನ ಇಲಾಖೆ ನೀಡಿದೆ. ಈ ಮೂರು ದಿನಗಳ ಕಾಲ ರಾಜ್ಯದಲ್ಲಿ ಯಲ್ಲೊ ಅಲರ್ಟ ಘೋಷಿಸಲಾಗಿದೆ.

ಈ ಮೂರು ದಿನ ರಾಜ್ಯದಲ್ಲಿ 30 ರಿಂದ 40 ಕಿಮಿ ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಭಾರಿ ಮಳೆಯಾಗಲಿದೆ , ಎಂದು ಹವಾಮಾನ ಇಲಾಖೆ ರಾಜ್ಯದ ಜನತೆಗೆ ಮುನ್ನೆಚ್ಚರಿಕೆ ನೀಡಿದೆ.

ಸೋಮವಾರ ರಾತ್ರಿ ಗೋವಾ ರಾಜ್ಯಾದ್ಯಂತ ಭಾರಿ ಮಳೆಯಾಗಿದೆ. ರಾಜ್ಯದಲ್ಲಿ ಸದ್ಯ ನರಕಾಸುರನ ಪ್ರತಿಕೃತಿಯ ಸಿದ್ಧತಾ ಕಾರ್ಯಕ್ಕೂ ಇದರಿಂದ ಅಡ್ಡಿಯುಂಟಾಗಿದೆ. ಹಲವೆಡೆ ಗಾಳಿಗೆ ರಸ್ತೆಯ ಮೇಲೆ ಮರ ಬಿದ್ದಿರುವ ಕುರಿತಂತೆಯೂ ವರದಿಯಾಗಿದೆ.