ಸುದ್ಧಿಕನ್ನಡ ವಾರ್ತೆ
Goa: ಗೋವಾದ ಸಾಳಗಾಂವನಲ್ಲಿ ಮನೆ ಮಾಲೀಕರ ಒಂದೂವರೆ ಲಕ್ಷ ರೂ ಹಣ ಹಾಗೂ ಸುಮಾರು ಒಂದೂವರೆ ಲಕ್ಷ ರೂ ಮೌಲ್ಯದ ವಿವಿಧ ವಸ್ತುಗಳ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಾಗಲಕೋಟೆಯ ಅರುಣ ಪರಶುರಾಮ ಲಮಾಣಿ (21) ಎಂಬ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯು ದುಮಿಂಗೋಸ್ ಡಿಸೋಜಾ ರವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬಾಡಿಗೆ ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ ಆರೋಪಿಯು ಮನೆ ಮಾಲೀಕರ ಹಣ ಮತ್ತು ವಿವಿಧ ವಸ್ತುಗಳ ಕಳ್ಳತನ ಮಾಡಿ ಪರಾರಿಯಾಗಿದ್ದ ಎಂಬ ಆರೋಪವಿದೆ.

ತನ್ನ ಮನೆ ದೋಚಿ ಬಾಡಿಗೆದಾರ ಪರಾರಿಯಾಗಿದ್ದಾನೆ ಎಂದು ತಿಳಿದ ಕೂಡಲೆ ಶಂಕಿತ ಆರೋಪಿಯ ಮೊಬೈಲ್ ಗೆ ಮನೆ ಮಾಲೀಕರು ಕರೆ ಮಾಡಿದರೆ ಆತನನ್ನು ಸಂಪರ್ಕಿಸಲು ಸಧ್ಯವಾಗಿಲ್ಲ ಎನ್ನಲಾಗಿದೆ. ನಂತರ ಮನೆ ಮಾಲೀಕರು ಸಾಳಗಾಂವ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಗೋವಾದ ಸಾಳಗಾಂವ ಪೋಲಿಸರು ಕರ್ನಾಟಕದ ಬಾಗಲಕೋಟೆಗೆ ತೆರಳಿ ಕರ್ನಾಟಕ ಪೋಲಿಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.