ಸುದ್ಧಿಕನ್ನಡ ವಾರ್ತೆ
Goa: ಗೋವಾದ ವಾಸ್ಕೊ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದ 22 ವರ್ಷದ ಪ್ರಥಮೇಶ ಗಾವಡೆ ಜುವಾರಿ ಹೊಸ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇವರ ಮೃತ ದೇಹಕ್ಕಾಗಿ ಶೋಧ ಕಾರ್ಯ ಕೈಕೊಳ್ಳಲಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಈ ಘಟನೆ ಅಕ್ಟೋಬರ್ 25 ರ ರಾತ್ರಿ ನಡೆದಿದೆ.
ಪೋಲಿಸ್ ಪೇದೆ ಪ್ರಥಮೇಶ ಗಾವಡೆ ರವರು ಕುಂಕಳ್ಳಿ ನಿವಾಸಿಯಾಗಿದ್ದಾರೆ. ಅವರು ವಾಸ್ಲೊ ರೈಲ್ವೆ ಪೋಲಿಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದಷ್ಟೇ ಪೋಲಿಸ್ ಪೇದೆಯಾಗಿ ಸೇರ್ಪಡೆಯಾಗಿದ್ದರು. ಅನಾರೋಗ್ಯದ ಸಮಸ್ಯೆ ಹೇಳಿ ಪ್ರಥಮೇಶ ರವರು ಎರಡು ದಿನಗಳ ರಜೆ ಪಡೆದಿದ್ದರು. ಅಂದು ಮನೆಗೆ ಹೋಗುವ ಬದಲು ನೇರವಾಗಿ ಜುವಾರಿ ಸೇತುವೆಯ ಮೇಲೆ ಬಂದು ನದಿಗೆಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.