ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಪತಂಜಲಿ ಯೋಗ ಸಮೀತಿ ಭಾರತ ಸ್ವಾಭಿಮಾನ್ ಟ್ರಸ್ಟ ಯಲ್ಲಾಪುರ ಉತ್ತರ ಕನ್ನಡ, ನಿರಂತರ ಯೋಗ ಕಲಿಕಾ ಕೇಂದ್ರ ಅಡಿಕೆ ಭವನ ಯಲ್ಲಾಪುರ ಯಶಸ್ವಿ 15 ನೇಯ ವರ್ಷಕ್ಕೆ ಪಾದಾರ್ಪಣೆಯ ಈ ಸಂದರ್ಭದಲ್ಲಿ ಸ್ಥಳ ದಾನಿಗಳಿಗೆ ಹಾಗೂ ಯೋಗ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಅಕ್ಟೋಬರ್ 27 ರಂದು ರವಿವಾರ ಮುಂಜಾನೆ 6.30 ಕ್ಕೆ ಆಯೋಜಿಸಲಾಗಿದೆ.

ಕರ್ನಾಟಕ ಪತಂಜಲಿ ಯೋಗ ಸಮೀತಿಯ ರಾಜ್ಯ ಸಮೀತಿ ಸದಸ್ಯರಾದ ರಾಮಚಂದ್ರ ಹೆಗಡೆ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದಾರೆ. ಯಲ್ಲಾಪುರ ಪತಂಜಲಿ ಯೋಗ ಸಮೀತಿಯ ಅಧ್ಯಕ್ಷ ವಿ.ಕೆ.ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲೆಯ ಪತಂಜಲಿ ಯೋಗ ಸಮೀತಿಯ ಕಾರ್ಯದರ್ಶಿ ರಘುರಾಮ ಹೆಗಡೆ, ಪತಂಜಲಿ ಯೋಗ ಸಮೀತಿ ಯಲ್ಲಾಪುರದ ಉಪಾಧ್ಯಕ್ಷ ನಾಗೇಶ್ ರಾಯಕರ್, ಯಲ್ಲಾಪುರ ಪತಂಜಲಿ ಯೋಗ ಸಮೀತಿಯ ಕಾರ್ಯದರ್ಶಿ ಸತೀಶ್ ಹೆಗಡೆ, ಯಲ್ಲಾಪುರ ಪತಂಜಲಿ ಯೋಗ ಸಮೀತಿಯ ಮಹಿಳಾ ಪ್ರಭಾರಿ ಶೈಲಶ್ರೀ ಭಟ್, ಯಲ್ಲಾಪುರ ಪತಂಜಲಿ ಯೋಗ ಸಮೀತಿಯ ಹಿರೀಯ ಸದಸ್ಯ ಜಿ.ಎಸ್.ಭಟ್ ರವರು ಉಪಸ್ಥಿತರಿರುವರು.

ಯಲ್ಲಾಪುರ ಅಡಿಕೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಹೆಗಡೆ, ಯಲ್ಲಾಪುರ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ರವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಜರುಗಲಿದೆ.

ಲಯನ್ಸ ಜಿಲ್ಲಾ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕøತರು ಹಾಗೂ ರಾಜ್ಯ ಮಟ್ಟದ ಯೋಗ ಸ್ಫರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದ ಶಿಕ್ಷಕ ಸುಬ್ರಾಯ ಭಟ್, ಯೋಗಾಸನ ಸ್ಫರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಿಕ್ಷಕ ದಿವಾಕರ ಮರಾಠಿ ಎಂಬ ಇಬ್ಬರು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಜರುಗಲಿದೆ.
ಸಂಜೆ 4.40 ಗಂಟೆಗೆ ಯಲ್ಲಾಪುರ ಹಿರಿಯರ ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ ಕುಶಲೋಪಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಯಲ್ಲಾಪುರ ಪತಂಜಲಿ ಯೋಗ ಸಮೀತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಯಲ್ಲಾಪುರ ನಿರಂತರ ಯೋಗ ಕಲಿಕಾ ಕೇಂದ್ರ ಅಡಿಕೆ ಭವನದ ಸರ್ವ ಯೋಗ ಬಂಧುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.