ಸುದ್ದಿ ಕನ್ನಡ ವಾರ್ತೆ

ಶಿರಸಿ: ಈಚೆಗೆ ನಡೆದ ಎಸ್ಸೆಸ್ಸೆಲ್ಸಿಯ ಪರೀಕ್ಷೆ 2 ರಲ್ಲಿ ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಪ್ರತಿಮಾ ಹೆಗಡೆ ಮತ್ತು ಸುದರ್ಶನ ಹೆಗಡೆ ಇವರ ಪುತ್ರಿ. ಪರೀಕ್ಷೆ ೧ರಲ್ಲಿ ೬೦೯ ಅಂಕ ಪಡೆದಿದ್ದಳು. ೨ರ ಪರೀಕ್ಷೆಯಲ್ಲಿ ಇಂಗ್ಲೀಷ್, ಗಣಿತ, ವಿಜ್ಞಾನ ಪರೀಕ್ಷೆ ಬರೆದಿದ್ದಳು.

ಜೊತೆಗೆ ದಿಶಾ ರಾಜೇಶ್ ನಾಯ್ಕ ಇವಳು 617 ಅಂಕ ಗಳಿಸಿ ರಾಜ್ಯಕ್ಕೆ 9 ನೇ ಸ್ಥಾನ, ಅರವಿಂದ್ ಎಚ್. 616 ಮತ್ತು ಮಹಿಮಾ ಅಂಗಡಿ 616 ಅಂಕ ಗಳಿಸಿ ರಾಜ್ಯಕ್ಕೆ 10 ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮಾರಿಕಾಂಬಾ ಪ್ರೌಢಶಾಲೆಯ ಒಟ್ಟು 13 ವಿದ್ಯಾರ್ಥಿಗಳು ರಾಜ್ಯಕ್ಕೆ ರ್ಯಾಂಕ್ ಗಳಿಸಿದಂತಾಗಿದೆ.

ಪ್ರೌಢಶಾಲೆಯ ಎಲ್ಲಾ 501 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶ ಸಾಧಿಸಿ ಇತಿಹಾಸ ಸೃಷ್ಟಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಸಕ ಭೀಮಣ್ಣ ನಾಯ್ಕ , ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಉಪಪ್ರಚಾರ್ಯ ಶ್ರೀಧರ್ ಕೆ.ಎಚ್., ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.