ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ತಾರಿಪಾಲ್-ಬಟ್ಲಗುಂಡಿ ಭಾಗದಲ್ಲಿ ಬ್ರಹದಾಕಾರದ 2 ಮರ ಬಿದ್ದು ಸುಮಾರು 8 ವಿದ್ಯುತ್ ಕಂಬ ಧರೆಗುರುಳಿದ್ದು, ವಿದ್ಯುತ್ ಲೈನ್ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಮಾರ್ಗದಲ್ಲಿ ಸದ್ಯ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಬುಧವಾರ ರಾತ್ರಿ ಕೊಡ್ಲಗದ್ದೆ ಭಾಗದಲ್ಲಿ ಭಾರಿ ಗಾಳಿ ಮಳೆಯಾಗಿದೆ. ಈ ಗಾಳಿ ಮಳೆಗೆ ಬೃಹತ್ ಗಾತ್ರದ ಎರಡು ಸಾಗವಾನಿ ಮರ ಬಿದ್ದು 8 ವಿದ್ಯುತ್ ಕಂಬ ಮುರಿದುಬಿದ್ದಿದೆ. ಗುಳ್ಳಾಪುರ ಗ್ರಿಡ್ ನಿಂದ ಹೊನಗದ್ದೆ, ಬಾಸಲ್, ಮಾವಿನಮನೆ, ಮಲವಳ್ಳಿ ಭಾಗಕ್ಕೆ ಈ ಮೂಲಕವೇ ವಿದ್ಯುತ್ ಪೂರೈಕೆಯಾಗುತ್ತದೆ. ಆದರೆ ಇದೀಗ ಈ ಮುಖ್ಯ ಲೈನ್ ಬಿದ್ದಿರುವುದರಿಂದ ಈ ಎಲ್ಲಾ ಮುಂದಿನ ಊರುಗಳಿಗೆ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ವಿದ್ಯುತ್ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡುವಂತೆ ಸ್ಥಳೀಯರು ಆಘ್ರಹಿಸಿದ್ದಾರೆ.