ಸುದ್ಧಿಕನ್ನಡ ವಾರ್ತೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಿ ಚಂಡಮಾರುತವಾಗಿ ಮಾರ್ಪಟ್ಟಿದ್ದು ಓಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅಕ್ಟೋಬರ್ 24 ಮತ್ತು 25 ರಂದು ಡಾನಾ ಚಂಡಮಾರುತ ಅಪ್ಪಳಿಸಲಿದೆ. ಈಗಾಗಲೇ ಅಂಡಮಾನ ನಿಕೋಬಾರ್ ಗಳಲ್ಲಿ ಚಂಡಮಾರುತದ ಅಬ್ಬರ ಆರಂಭಗೊಂಡಿದೆ.
ವೇಗದಲ್ಲಿ ಹೊರಹೊಮ್ಮುತ್ತಿರುವ ಈ ಡಾನಾ ಚಂಡಮಾರುತ ಆಗ್ನೇಯ ದಿಕ್ಕಿನಲ್ಲಿ ಚಲಿಸಲಿದ್ದು ಗಂಟೆಗೆ 520 ಕಿಮಿ ವೇಗದಲ್ಲಿ ಮುನ್ನುಗ್ಗಲಿದೆ. ಓಡಿಶಾಗೆ ಅಪ್ಪಳಿಸುವ ಸಂದರ್ಭದಲ್ಲಿ ಈ ಚಂಡಮಾರುತ ತನ್ನ ವೇಗ ಕಳೆದುಕೊಂಡು 110 ಕಿಮಿ ಯಿಂದ 120 ಕಿಮಿ ವೇಗದಲ್ಲಿ ಅಪ್ಪಳಿಸಲಿದೆ. ಈ ಎರಡೂ ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದ್ದು ರೆಡ್ ಅಲರ್ಟ ಘೋಷಿಸಲಾಗಿದೆ.