ಸುದ್ಧಿಕನ್ನಡ ವಾರ್ತೆ
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಮುಂದುವರೆದಿದ್ದು, ಬುಧವಾರ ಒಂದೇ ಗಂಟೆಯಲ್ಲಿ 4 ಇಂಚಿನಷ್ಟು ಮಳೆಯಾಗಿದೆ. ಈ ಭಾರಿ ಮಳೆ ಕಂಡು ಜನತೆ ಕಂಗಾಲಾಗಿದ್ದಾರೆ. ರಸ್ತೆಯಲ್ಲಿ ಒಂದು ಅಡಿ ಎತ್ತರದಲ್ಲಿ ನೀರು ನದಿಯಂತೆ ಹರಿದಿದೆ.

ಚಿಕ್ಕಮಗಳೂರು ಮುತ್ತೋಡಿ, ಮಲ್ಲಂದೂರು ಭಾಗದಲ್ಲಿ ಭಾರಿ ಮಳೆ ಸುರಿದಿದ್ದು ರಸ್ತೆ ಬದಿ ಸುಮಾರು 30 ಅಡಿಯಷ್ಟು ಕುಸಿದಿದ್ದು, ರಸ್ತೆ ಸಂಚಾರ ಯಾವುದೇ ಸಂದರ್ಭದಲ್ಲೂ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ.

ಭಾರಿ ಮಳೆಗೆ ಚಿಕ್ಕಮಗಳೂರಿನ ಮಲ್ಲಂದೂರು, ಮುತ್ತೋಡಿ, ಗಾಳಿಗುಡ್ಡೆ, ಮೇಲಿನ ಹುಲುವತ್ತಿ, ಸೇರಿ ಹತ್ತಾರು ಹಳ್ಳಿಗಳ ಜನತೆ ಕಂಗಾಲಾಗಿದ್ದಾರೆ.