ಸುದ್ಧಿಕನ್ನಡ ವಾರ್ತೆ
Goa: ಮಾಹಾಬಲೇಶ್ವರ ರಾ. ಹೆಗಡೆ, ಹೆಗ್ನೂರು (ಎಂ.ಆರ್.ಹೆಗಡೆ ಗೋವಾ) ಇವರು ಮಂಗಳವಾರ ಅಕ್ಟೋಬರ್ 22 ರಂದು ಬೆಳಗಿನ ಜಾವ ವಿಧಿವಷರಾಗಿದ್ದಾರೆ.
ಶ್ರೀಯುತರು ಶ್ರೀ ಸೋಂದಾ ಮಠದ ಸರ್ವ ಶ್ರೇಯೋಭಿವೃದ್ಧಿಗೆ ಮೊದಲಿನಿಂದಲೂ ಕೊಡುಗೈ ದಾನಿಯಾಗಿ ಸಹಕರಿಸುತ್ತಾ ಬಂದಿದ್ದಾರೆ. ಅತ್ಯಂತ ಸರಳ, ಸ್ನೇಹಪರ, ಸಮಾಜಮುಖಿ, ಆಸ್ತಿಕ ಶ್ರದ್ಧಾವಂತ ವ್ಯಕ್ತಿಯಾಗಿದ್ದ ಇವರ ನಿಧನ ನಮ್ಮ ಮಠಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ನಮ್ಮನ್ನಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಕುಟುಂಬದವರಿಗೆ, ಬಂಧು ಬಳಗದವರಿಗೆ ದುಃಖ ಸೈರಿಸುವ ಶಕ್ತಿಯನ್ನು ನೀಡೆಂದು ಗೋವಾ ವೈದಿಕ ಪರಿಷತ್ ಸದಸ್ಯರು ಎಂದು ಸಂತಾಪ ಸೂಚಿಸಿದ್ದಾರೆ.