Banner Ad

ಸುದ್ದಿ ಕನ್ನಡ ವಾರ್ತೆ

ಬೆಳಗಾವಿ: ವಿಶ್ವಬಸವ ಜಯಂತಿ 2026ರ ನಿಮಿತ್ತ ಬೆಂಗಳೂರಿನ ಕೇಂದ್ರ ಬಸವ ಸಮಿತಿ “ಬಸವಾದಿ ಶರಣರು ಕಟ್ಟಿದ ಮಾನವತಾ ಧರ್ಮ” ವಿಷಯ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಬೆಳಗಾವಿ ಮಹಾನಗರದ ರಾಮದೇವಗಲ್ಲಿಯ ನಿವಾಸಿಗಳು, ಪತ್ರಕರ್ತ, ಅಂಕಣಕಾರರಾದ ಡಾ. ಅರುಣ ಅಶೋಕ ಹೊಸಮಠ ಅವರ ನಿವಾಸಕ್ಕೆ ಕೇಂದ್ರ ಬಸವ ಸಮಿತಿಯ ಪರವಾಗಿ ಖ್ಯಾತ ಪ್ರವಚನ ಪಟು, ಗಂದಿಗವಾಡದ ರಾಜಗುರು ಸಂಸ್ಥಾನದ ಪೂಜ್ಯ ಶ್ರೀ ಮೃತ್ಯುಂಜಯ ಸ್ವಾಮೀಜಿ ಅವರು ಸನ್ಮಾನಿಸಿ, ಅಭಿನಂದಿಸಿ, ಆಹ್ವಾನಿಸಿದರು.

Banner Ad

ಈ ಸಂದರ್ಭದಲ್ಲಿ ಕೇಂದ್ರ ಬಸವ ಸಮಿತಿಯ ಹಿರಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ, ಬಸವ ಸಮಿತಿಯು ಆರು ದಶಕಗಳಿಂದ ಬಸವ ಜಯಂತಿ ನಿಮಿತ್ತ ಅನೇಕ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿದೆ. ಸ್ಪರ್ಧೆಗಳ ಮೂಲಕ ಬಸವಾದಿ ಶರಣರ ಸಂದೇಶಗಳನ್ನು ಏಳೆಯರಲ್ಲಿ ಮತ್ತು ಯುವ ಜನಾಂಗಕ್ಕೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈ ಬಾರಿಯ ಪ್ರಬಂಧ ಸ್ಪರ್ಧೆಯಲ್ಲಿ ಬೆಳಗಾವಿ ಮಹಾನಗರದ ಡಾ. ಅರುಣ ಹೊಸಮಠ ಅವರಿಗೆ ದ್ವಿತೀಯ ಸ್ಥಾನ ಲಭಿಸಿರುವುದು ಕಿತ್ತೂರು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಾಗಿದ್ದಕ್ಕೆ ಡಾ. ಅರುಣ ಹೊಸಮಠ ಅವರನ್ನು ಸನ್ಮಾನಿಸಿ, ಬೆಂಗಳೂರಿನಲ್ಲಿ ಇದೇ 20 ಏಪ್ರೀಲ್ 2026ರಂದು ಜರುಗುವ ವಿಶ್ವ ಬಸವ ಜಯಂತಿ 2026ರ ಕಾರ್ಯಕ್ರಮದ ಆಹ್ವಾನ ನೀಡಲಾಯಿತು. ಉದ್ಯಮಿ ಈರಣ್ಣ ಶಂಕರಪ್ಪ ಜ್ಯೋತಿ (ಮೋಹರೆ) ಉಪಸ್ಥಿತರಿದ್ದರು.

Banner Ad