ಸುದ್ಧಿಕನ್ನಡ ವಾರ್ತೆ
Goa: ಗೋವಾ-ಅಹಮದಾಬಾದ್ ವಿಮಾನದಲ್ಲಿ ( Goa-Ahmedabad flight) ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಂಗಾಲಾದ ಘಟನೆ ನಡೆದಿದೆ.
ಪೋಲಿಸ್ ಮತ್ತು ಸುರಕ್ಷಾ ದಳದವರು ಈ ವಿಮಾನ ಮತ್ತು ಪ್ರವಾಸಿಗರ ತಪಾಸಣೆ ನಡೆಸಿದ ನಂತರ ಇದೊಂದು ಹುಸಿ ಬಾಂಬ್ ಕರೆ ಎಂಬುದು ಸ್ಪಷ್ಟವಾಗಿದೆ.

ಇಂಡಿಗೊ 6ಇ 112 ಎಂಬ ಗೋವಾ-ಅಹಮದಾಬಾದ್ ವಿಮಾನವು ಸಮಯಕ್ಕೆ ಸರಿಯಾಗಿ ಗೋವಾದಿಂದ ಭಾನುವಾರ ಟೇಕ್ ಅಪ್ ಆಗಿತ್ತು. ಈ ವಿಮಾನವು ಮಧ್ಯಾನ್ಹ 1 ಗಂಟೆ 8 ನಿಮಿಷಕ್ಕೆ ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ ರನ್ ವೇ ದಲ್ಲಿಯೇ ವಿಮಾಣ ನಿಲ್ಲಿಸಲಾಗಿತ್ತು. ಇದರಿಂದಾಗಿ ಪ್ರಯಾಣಿಕರು ಆಕಂಕಕ್ಕೊಳಗಾದರು.

ನಂತರ ಸುರಕ್ಷಾ ರಕ್ಷಕರು ಬಂದು ಪ್ರಯಾಣಿಕರು ಎಲ್ಲರೂ ಶಾಂತತೆ ಕಾಯ್ದುಕೊಳ್ಳುವಂತೆ ಸೂಚಿಸಿದರು. ನಂತರ ವಿಮಾನ ಮತ್ತು ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ಇದು ಹುಸಿ ಬಾಂಬ್ ಕರೆ ಎಂಬುದು ಖಚಿತವಾಗಿದೆ.