ಸುದ್ಧಿಕನ್ನಡ ವಾರ್ತೆ
ಶಿರಸಿ: ಯಕ್ಷಗಾನ, ತಾಳಮದ್ದಲೆ ಜೊತೆ ತತ್ವ ನೀಡಿದರೆ ಸನ್ಮಾರ್ಗಕ್ಕೆ ತೆರಳಲು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮಜ್ಜಗದ್ಗುರು ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.(Sonda Swarnavalli Abbot Srimajjagadguru Shri Gangadharendra Saraswati Maha Swamiji said that if you give Tatwa along with Yakshagana and Talamaddale, you can go to the right path).
ನಗರದ ಟಿಎಂಎಸ್ ಸಭಾಂಗಣದಲ್ಲಿ ಯಕ್ಷ ಸಂಭ್ರಮ ಟ್ರಸ್ಟ್ ಹಮ್ಮಿಕೊಂಡ ದಶಕಂ ಧರ್ಮ ಲಕ್ಷ್ಮಣಂ ತಾಳಮದ್ದಲೆ ದಶಾಹದ ಹಿನ್ನಲೆಯಲ್ಲಿ ರವಿವಾರ ಚಂದು ಬಾಬು ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಉಪನಿಷತ್ತಿನ ತತ್ವಗಳನ್ನು ನೀಡುವ ಆಖ್ಯಾನಗಳನ್ನು ರಂಗಕ್ಕೆ ತರುವದು ವಿರಳ. ಯಕ್ಷಗಾನದ ಅಭಿಮಾನಿ ಆದವನು ಧರ್ಮದ ಅಭಿಮಾನಿ ಕೂಡ ಆಗಿರುತ್ತಾನೆ. ಯಕ್ಷಗಾನದ ಮೂಲಕ ಧರ್ಮದ ಪ್ರಚಾರ ಒಳ್ಳೆಯ ಉಪಾಯ ಕೂಡ ಎಂದರು.
ಧರ್ಮದ ಹತ್ತು ಲಕ್ಷಣದಲ್ಲಿದ್ದಂತೆ ತಾಳಮದ್ದಲೆ ಪ್ರಸಂಗ ಜೋಡಿಸಲಾಗಿದೆ. ಯಕ್ಷಗಾನ ತಾಳಮದ್ದಲೆ ಎಂದರೆ ಅದೊಂದು ಮಾತಿನ ತೋರಣ ಎಂದು ಬಣ್ಣಿಸಿದ ಶ್ರೀಗಳು, ಸಂಸ್ಕೃತದ ಜೊತೆಗಿನ ನಂಟಿನ ಭಾಗವತಿಕೆಯ ನಂಟಿನ ಭಾಗವತರು ಗಣಪತಿ ಭಟ್ಟ ಅವರು. ಅವರಿಗೆ ಪ್ರಶಸ್ತಿ ಸಿಕ್ಕಿದ್ದು ಸಂತಸವಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಗವತ ಗಣಪತಿ ಭಟ್ಟ ಮೊಟ್ಟೆಗದ್ದೆ ಮಾತನಾಡಿ, ಪ್ರದಾನ ಮಾಡಲಾದ ಗುರುಗಳ ಅನುಗ್ರಹ, ಉಪದೇಶ ಮುಖ್ಯ. ಸಾಧಕ ಗುರುಗಳ ಕರದಿಂದ ಸಿಕ್ಕ ಈ ಪ್ರಶಸ್ತಿ ಧನ್ಯತಾ ಭಾವ ಸೃಷ್ಟಿಸಿದೆ . ಹಿಂದಿನ ಕಲಾವಿದರು ಕಲೆಯ ಉಳಿವಿಗೆ ಶ್ರಮಿಸಿದ್ದರ ಪುಣ್ಯದಿಂದ ಇಂದು ನಮಗೆ ಪ್ರಶಸ್ತಿ ಬಂದಿದೆ ಎಂದರು.
ಪ್ರಸಿದ್ಧ ಅರ್ಥಧಾರಿ ವಾಸುದೇವ ರಂಗ ಭಟ್ಟ ಅಭಿನಂದನಾ ನುಡಿ ಆಡಿ, ಹಾಡು ಗಣಪತಿ ಭಟ್ಟ ಅವರ ಬದುಕು ಕಟ್ಟಿಕೊಟ್ಟಿದೆ. ಅವರಿಗೆ ಯಕ್ಷಗಾನದ ಹಾಡೇ ಉಸಿರು ಎಂದು ಬಣ್ಣಿಸಿದರು.
ಈ ವೇಳೆ ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ, ಸೀತಾರಾಮ ಚಂದು, ಇಂದಿರಾ ಸೀತಾರಾಮ ಹೆಗಡೆ, ಇಂದಿರಾ ಗ.ಭಟ್ಟ ವೇದಿಕೆಯಲ್ಲಿದ್ದರು. ವಾದಿರಾಜ ಕಲ್ಲೂರಾಯ ನಿರ್ವಹಿಸಿದರು. ಬಾಲಚಂದ್ರ ಕೆಶಿನ್ಮನೆ ವಂದಿಸಿದರು.