ಸುದ್ಧಿಕನ್ನಡ ವಾರ್ತೆ
Goa: ದೀಪಾವಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಗೋವಾದಲ್ಲಿ ದೀಪಾಲಂಕಾರಗಳು ಕಣ್ಮನ ಸೆಳೆಯುತ್ತದೆ. ಈ ಹಬ್ಬವನ್ನು ಉತ್ಸಾಹ ಮತ್ತು ವಿಜಯದ ಹಬ್ಬ ಎಂದು ಕರೆಯುತ್ತಾರೆ. ಗೋವಾದಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನರಕಾಸುರನ ಪ್ರತಿಕ್ರತಿಯನ್ನು ದಹಿಸುವುದು ದೊಡ್ಡ ಸಂಪ್ರದಾಯವೆಂದೇ ಪರಿಗಣಿಸಲಾಗಿದೆ. (Burning an effigy of Narakasura is considered a big tradition in Goa during Diwali celebrations). ಗೋವಾದಲ್ಲಿ ಗ್ರಾಮೀಣ ಭಾಗಗಳಿಂದ ಹಿಡಿದು ನಗರ ಪ್ರದೇಶಗಳಲ್ಲಿಯೂ ಸದ್ಯ ನರಕಾಸುರನ ಸಿದ್ಧಪಡಿಸಲಾಗುತ್ತಿದೆ.
ದೀಪಾವಳಿ ಹಬ್ಬದ ದಿನದಂದು ಬೆಳಗಿನ ಜಾವ ನರಕಾಸುರನ ದಹನ ಮಾಡಿ ನಂತರ ಅಭ್ಯಂಗ ಸ್ನಾನ ಮಾಡುವ ಪದ್ಧತಿ ಗೋವಾದಲ್ಲಿ ಇದೆ. ಅಂದು ಬೆಳಿಗ್ಗೆ ಅವಲಕ್ಕಿ ತುಂಬಾ ವಿಶೇಷ. ಮನೆ ಮನೆಯಲ್ಲಿ ಬಗೆ ಬಗೆಯ ಅವಲಕ್ಕಿ ಹಾಗೂ ಸಿಹಿ ಖಾದ್ಯಗಳನ್ನು ಮಾಡಿ ಹಬ್ಬ ಆಚರಿಸುವುದು ಗೋವಾದ ವಿಶೇಷ.
ಗೋವಾದಲ್ಲಿ ಅಭ್ಯಂಗ ಸ್ನಾನ ಮಾಡುವ ಮುನ್ನಾದಿನ ರಾತ್ರಿ ಗಲ್ಲಿ ಗಲ್ಲಿಯಲ್ಲಿ ಬೃಹತ್ ಗಾತ್ರದ ನರಕಾಸುವನ ಪ್ರತಿಕ್ರತಿಗಳನ್ನು ವೀಕ್ಷಿಸುವುದೇ ಒಂದು ದೊಡ್ಡ ಉತ್ಸವ. ಅಂದು ನರಕಾಸುರನ ವೀಕ್ಷಿಸಲು ಎಲ್ಲರೂ ತೆರಳುವುದರಿಂದ ಎಲ್ಲಡೆ ಜನಜಂಗುಳಿ ಕಂಡುಬರುತ್ತದೆ. ನರಕಾಸುರನ ಸ್ಫರ್ಧೆಯೂ ಕೂಡ ಕೆಲವೆಡೆ ನಡೆಯುತ್ತದೆ, ಇದಂತೂ ನೋಡುಗರಿಗೆ ಹಬ್ಬವೇ ಸರಿ.(Narakasura’s competition also takes place in some places).
ಗೋವಾ ರಾಜ್ಯಾದ್ಯಂತ ಸದ್ಯ ನರಕಾಸುರನ ಪ್ರತಿಕೃತಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.