ಸುದ್ದಿಕನ್ನಡ ವಾರ್ತೆ
Goa: ಗೋವಾ-ಬೆಳಗಾವಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸತೋಲಿ ಸೇತುವೆಯ ಬಳಿ ಭಾರಿ ಹೊಂಡ ಮತ್ತು ಕೆಸರುಮಯವಾಗಿದ್ದು ವಾಹನಗಳು ಸಿಲುಕಿಕೊಂಡು ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗುತ್ತಿದೆ. ಇದೇ ರೀತಿಯ ಘಟನೆ ಈಗಾಗಲೇ ಹಲವು ಭಾರಿ ಸಂಭವಿಸಿದೆ. ವಾಹನಗಳು ಸಿಲುಕಿಕೊಂಡಾಗ ರಾತ್ರಿಯಿಡೀ ಈ ಮಾರ್ಗದ ಸಂಚಾರ ಸ್ಥಗಿತಗೊಂಡ ಘಟನೆಯೂ ನಡೆದಿದೆ. ಈ ಮಾರ್ಗದಲ್ಲಿ ಯಾವುದೇ ಸಂದರ್ಭದಲ್ಲಿ ವಾಹನ ಸಿಲುಕಿಕೊಂಡು ಸಂಚಾರ ಸಂಪೂರ್ಣ ಬಂದ್ ಆಗುವ ಭೀತಿಯಿದೆ. (On the national highway connecting Goa-Belagavi, near the Asatoli bridge, there are huge potholes and mud, and the vehicles are stuck and the traffic on the road is completely blocked).
ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮನಗರದಿಂದ ಅನಮೋಡ್ ವರೆಗೆ ರಸ್ತೆ ಹದಗೆಟ್ಟಿರುವುದರಿಂದ ವಾಹನ ದಟ್ಟಣೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ರಾಮನಗರ ಬಳಿಯ ಅಸ್ತೋಲಿ ಸೇತುವೆ ಬಳಿ ವಾಹನಗಳು ಸಿಲುಕಿಕೊಂಡಿದ್ದರಿಂದ ಬುಧವಾರ ಕೂಡ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ರಸ್ತೆ ನಿರ್ವಹಣೆ ಹೊಣೆ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗುತ್ತಿದ್ದು, ಜಿಲ್ಲಾಡಳಿತವೂ ಈ ಬಗ್ಗೆ ಕಣ್ಮುಚ್ಚಿ ಕುಳಿತಿದೆ.
ಅಸ್ತೋಲಿ ಸೇತುವೆ ಪಕ್ಕದ ಸುಮಾರು 300 ಮೀಟರ್ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುತ್ತಿವೆ. ಈ ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದರಿಂದ ವಾಹನಗಳು ಇಲ್ಲಿ ಸಿಲುಕಿಕೊಳ್ಳುತ್ತವೆ. ಬುಧವಾರದಿಂದ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದ್ದು, ಮತ್ತೆ ಇಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದ ಈಗ ರಸ್ತೆ ಸಂಚಾರ ಬಂದ್ ಆಗಿದ್ದು, ಸ್ಥಳೀಯರಿಗೂ ತೊಂದರೆಯಾಗಿದೆ.(It has been raining heavily since Wednesday and the traffic here has been disrupted again. Due to this, the road traffic is now closed and the locals are also suffering).
ಈ ಮಾರ್ಗದಲ್ಲಿ ತಿನಿಘಾಟ್, ಬರದಕೋಟ್, ಜಲ್ಕಟ್ಟಿ, ಅಖೇಟಿ, ಅನ್ಮೋಡ್ ಮುಂತಾದ ಕಡೆ ಹೋಗುವ ಬಸ್‍ಗಳು ಸದ್ಯಕ್ಕೆ ಬಂದ್ ಆಗಿವೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಅಸ್ತೋಲಿಯಲ್ಲಿ ಪದೆ ಪದೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗುತ್ತಿರುವುದರಿಂದ ಗೋವಾಕ್ಕೆ ಹೋಗುವ ಬಸ್‍ಗಳು ಮತ್ತು ಲಘು ನಾಲ್ಕು ಚಕ್ರದ ವಾಹನಗಳು ಜಗಲಬೆಟ್ – ಆಸು – ಕೆಸ್ಲರ್‍ರಾಕ್ – ಅನ್‍ಮೋಡ್ ಪರ್ಯಾಯ ಮಾರ್ಗವಾಗಿ ಹೋಗುತ್ತಿದ್ದು, ಈ ರಸ್ತೆಯೂ ಟ್ರಾಫಿಕ್ ಜಾಮ್‍ಗೆ ಸಾಕ್ಷಿಯಾಗಿದೆ. ಚಂದವಾಡಿ ಕ್ರಾಸ್ ನಿಂದ ಕ್ಯಾಸಲ್ ರಾಕ್ ಕ್ರಾಸ್ ವರೆಗೆ ಈ ರಸ್ತೆ ಕಿರಿದಾಗಿದ್ದು, ದೊಡ್ಡ ದೊಡ್ಡ ಹೊಂಡಗಳಿರುವುದರಿಂದ ವಾಹನ ಸಂಚಾರ ತೀರಾ ಭಯಾನಕವಾಗಿದೆ.