ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿರುವ ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಪ್ರವಾಸೋದ್ಯಮ ಆರಂಭಕ್ಕೂ ಮುನ್ನವೇ ಮತ್ತೆ ವಿಘ್ನ ಬಂದಂತಾಗಿದೆ. ಆನ್ ಲೈನ್ ಕೌಂಟರ್ ಬಂದ್ ಮಾಡುವವರೆಗೂ ದೂಧಸಾಗರಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್ ಅಸೋಸಿಯೇಶನ್ ದೂಧಸಾಗರ ಜಲಪಾತಕ್ಕೆ ಜೀಪ್ ಓಡಾಟ ಆರಂಭಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದೆ. (Until the online counter is closed, the Jeep Association, which takes tourists to Dudhsagar, is insisting that they will not start jeep driving to Dudhsagar waterfall.).
ಅಕ್ಟೋಬರ್ 21 ರಿಂದ ದೂಧಸಾಗರ ಜಲಪಾತಕ್ಕೆ ಜೀಪ್ ಅಸೋಸಿಯೇಶನ್ ಪ್ರವಾಸಿಗರನ್ನು ಕರೆದೊಯ್ಯುವುದಾಗಿ ಹೇಳಿತ್ತು, ಇದರಿಂದಾಗಿ ಜಲಪಾತ ವೀಕ್ಷಣೆಗೆ ಕಾತುರದಿಂದ ಇದ್ದ ಪ್ರವಾಸಿಗರಿಗೆ ಇದೀಗ ಮತ್ತೆ ನಿರಾಸೆ ಮೂಡುವಂತಾಗಿದೆ. ಜಿಟಿಡಿಸಿ ಆರಂಭಿಸಿರುವ ಆನ್ ಲೈನ್ ಕೌಂಟರ್ ಬಂದ್ ಮಾಡುವ ವರೆಗೂ ದೂಧಸಾಗರ ಪ್ರವಾಸೋದ್ಯಮ ಆರಂಭಗೊಳ್ಳಲು ಬಿಡುವುದಿಲ್ಲ ಎಂದು ಶುಕ್ರವಾರ ಜೀಪ್ ಅಸೋಸಿಯೇಶನ್ ಪಟ್ಟು ಹಿಡಿದು ಕುಳಿತು ತೀವ್ರ ವಿರೋಧ ವ್ಯಕ್ತಪಡಿಸಿದೆ.
.
ಇದರಿಂದಾಗಿ ಜಗತ್ಪ್ರಸಿದ್ಧ ದೂಧಸಾಗರ ಪ್ರವಾಸೋದ್ಯಮ ಆರಂಭಗೊಳ್ಳಲು ಇನ್ನೂ ಕೆಲ ದಿನ ಕಾಯುವಂತಾಗಿದೆ. ಜಲಪಾತ ವೀಕ್ಷಣೆಗೆ ಕಾತುರದಿಂದ ಕಾದು ಕುಳಿತಿದ್ದ ಪ್ರವಾಸಿಗರಿಗೆ ಸದ್ಯ ನಿರಾಸೆಯಾದಂತಾಗಿದೆ
(Due to this, we have to wait a few more days for the world famous Dudhasagara tourism to start. The tourists who were eagerly waiting to see the waterfall are now disappointed).