ಸುದ್ಧಿಕನ್ನಡ ವಾರ್ತೆ
ಉತ್ತರಕನ್ನಡ: ಕರ್ನಾಟಕದ ಮುರುಡೇಶ್ವರದಲ್ಲಿ ಬೆಚ್ಚಿ ಬೀಳಿಸುವ ಸುದ್ಧಿಯೊಂದು ಹೊರಬಿದ್ದಿದೆ. (A shocking news has come out in Murudeshwar, Karnataka)  ಮುರುಡೇಶ್ವರ ದೇವಸ್ಥಾನವನ್ನೇ ಸ್ಪೋಟಿಸಲು ಸಂಚು ರೂಪಿಸಿರುವ ಆತಂಕಕಾರಿ ಸುದ್ಧಿ ಹೊರಬಿದ್ದಿದೆ.

ಉತ್ತರ ಕನ್ನಡ ಜಿಲ್ಕೆಯ ಭಟ್ಕಳದಲ್ಲಿ 6 ಜನ ಉಗ್ರರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಮುರುಡೇಶ್ವರ ದೇವಸ್ಥಾನದಲ್ಲಿ ಬಾಂಬ್ ಸ್ಪೋಟ ನಡೆಸಲು ಯತ್ನಿಸಿದ್ದರು ಎಂಬ ಬೆಚ್ಚಿಬೀಳಿಸುವ ಸುದ್ಧಿ ಬೆಳಕಿಗೆ ಬಂದಿದೆ.

ಪೋಲಿಸರು ಕಾರ್ಯಾಚರಣೆ ನಡೆಸಿ ಈ ಬಾಂಬ್ ಸ್ಪೋಟ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಬಂಧಿತರಿಂದ ಮಾಹಿತಿ ಕಲೆಹಾಕುತ್ತಿರುವ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

 

                           ಅಸಲಿ ಬಾಂಬ್ ಅಲ್ಲ, ಅಸಲಿ ಭಯೋತ್ಪಾದಕರೂ ಅಲ್ಲ…?

ಕರಾವಳಿ ಭಾಗದಲ್ಲಿ ಸಾಗರ ಕವಚ ಎಂಬ ಅಣಕು ಕಾರ್ಯಾಚರಣೆ ನಡೆಸಲಾಗುತ್ತದೆ. ನೌಕಾ ಅಧಿಕಾರಿಗಳು ಮಾರು ವೇಷದಲ್ಲಿ ಆಗಮಿಸಿ ಬಾಂಬ್ ಇಡುವ ನಾಟಕವಾಡಿದ್ದು, ಅದನ್ನು ಪತ್ತೆ ಮಾಡುವುದು ಪೋಲಿಸರ ಕೆಲಸ. ಈ ಹಿನ್ನೆಲೆಯಲ್ಲಿ ಭಯೋತ್ಪಾದಕರ ವೇಷದಲ್ಲಿ ಬಂದ ನೌಕಾದಳದ ಸಿಬ್ಬಂಧಿಗಳನ್ನು ಪೋಲಿಸರು ಸೆರೆ ಹಿಡಿದಿದ್ದಾರೆ. ಅವರ ಬಳಿಯಿಂದ ನಕಲಿ ಬಾಂಬ್ ಗಳನ್ನು ವಷಕ್ಕೆ ಪಡೆದಿದ್ದಾರೆ. ಇದು ಅಸಲಿ ಬಾಂಬ್ ಅಲ್ಲ, ಸಿಕ್ಕಿಬಿದ್ದವು ಅಸಲಿ ಭಯೋತ್ಪಾದಕರೂ ಅಲ್ಲ ಎಂಬ ಅಪ್ಡೇಟ್ ಲಭ್ಯವಾಗಿದೆ.