ಸುದ್ಧಿಕನ್ನಡ ವಾರ್ತೆ
ಪಣಜಿ: LPG ಕೊರತೆ ನೀಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಪ್ರಯತ್ನ ನಡೆಸುತ್ತಿದೆ. ಎಚ್ ಪಿಸಿಲ್ , ಬಿಪಿಸಿಎಲ್, ಇಂಡಿಯನ್ ಆಯಿಲ್ ಕಂಪನಿಯೊಂದಿಗೆ ನಾನು ಸಭೆ ನಡೆಸಿ ಚರ್ಚಿಸಿದ್ದೇನೆ. ಗೋವಾದಲ್ಲಿ ಸಾಕಷ್ಟು ಎಲ್ಪಿಜಿ ಕೋಟಾ ಇದ್ದು, ಎಂಟು ದಿನಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗುವ ನಿರೀಕ್ಷೆಯಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.
ಪಣಜಿಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು- ವಾಣಿಜ್ಯ ಅನಿಲ ಪೂರೈಕೆ ಪ್ರಸ್ತುತ ಶೇ. 80 ರಷ್ಟು ಕೊರತೆಯನ್ನು ಎದುರಿಸುತ್ತಿದೆ, ಆದರೆ ಕೈಗಾರಿಕಾ ಅನಿಲ ಸಂಪರ್ಕಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪೈಪ್ ಮೂಲಕ ಅನಿಲ ಪೂರೈಕೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ಎರಡು ಮೂರು LPG ಸಂಪರ್ಕ ಹೊಂದಿರುವವರು ಅನಗತ್ಯವಾಗಿ ಸಿಲಿಂಡರ್ ತುಂಬಿಸಿಕೊಳ್ಳಲು ಗ್ಯಾಸ್ ಏಜನ್ಸಿ ಮುಂದೆ ನಿಂತು ಗರ್ದಿ ಮಾಡಬಾರದು. ಎಲ್ಲರೂ ಆನ್ ಲೈನ್ ಬುಕಿಂಗ್ ಮಾಡಿಕೊಂಡು 21 ದಿನಗಳ ನಂತರ ನಿಮ್ಮ ಏಜನ್ಸಿ ಬಳಿ ಸಿಲಿಂಡರ್ ತರಲು ತೆರಳಬೇಕು. ಬುಕಿಂಗ್ ಮಾಡದೆಯೇ ಏಜನ್ಸಿ ಬಳಿ ಹೋಗಬಾರದು. ಸದ್ಯ ಗೃಹ ಬಳಕೆಯ ಸಿಲಿಂಡರ್ ಕೊರತೆಯಿಲ್ಲ ಎಲ್ಲರಿಗೂ ಸಿಲಿಂಡರ್ ಲಭಿಸಲಿದೆ. ಹೋಟೆಲ್ ಗಳಿಗೆ ಬೇಕಾಗುವ ಕಮರ್ಶಿಯಲ್ ಸಿಲಿಂಡರ್ ಶೇ 80 ರಷ್ಟು ಕೊರತೆಯಿದೆ. ಶೇ 20 ರಷ್ಟು ಮಾತ್ರ ಲಭ್ಯವಿದೆ. ಈ ಸಮಸ್ಯೆಯು ಇನ್ನು ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
