ಸುದ್ಧಿಕನ್ನಡ ವಾರ್ತೆ

Goa: ಗೋವಾದಲ್ಲಿ ಈಗಲೂ ಮರಳು ಗಣಿಗಾರಿಕೆಗೆ ನಿಷೇಧವಿದೆ. ( Sand mining is still banned in Goa). ಆದರೆ ಸರ್ಕಾರ ಹೇರಿರುವ ನಿಷೇಧದಿಂದ ಮರಳು ಮಾಫಿಯಾಗೆ ಯಾವುದೇ ವ್ಯತ್ಯಾಸವಾದಂತೆ ಕಾಣುತ್ತಿಲ್ಲ. ಗೋವಾದ ಅಗರವಾಡಾದಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದೆ. ಈ ಅಕ್ರಮದ ವಿರುದ್ಧ ಸ್ಥಳೀಯರು ಧ್ವನಿಯೆತ್ತಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇವರ ವಿರುದ್ಧ ಸರ್ಕಾರ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಇದೇ ಅಕ್ಟೋಬರ್ 16 ರಂದು ಬುಧವಾರ ರಾತ್ರಿ 8.30 ಕ್ಕೆ ಶಾಪೋರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಈ ಅಕ್ರಮ ಚಟುವಟಿಕೆ ತಡೆಯಲು ಕರಾವಳಿ ಪೋಲಿಸ್ ಠಾಣೆಯನ್ನು ರಚಿಸಲಾಗಿದೆ. ಶಾಪೋರಾ ನದಿ ಭಾಗದಲ್ಲಿ ಶಿವೋಲಿ ಕರಾವಳಿ ಪೋಲಿಸರು ಗಸ್ತು ತಿರುಗುತ್ತಿರುತ್ತಾರೆ. ಆದರೆ ಈ ಅಕ್ರಮ ಚಟುವಟಿಕೆಯ ಕುರಿತು ಪೋಲಿಸರಿಗೆ ದೂರು ನೀಡಿದರೆ ಇಲ್ಲದ ನೆಪ ಹೇಳಿ ಪೋಲಿಸರು ನುಸುಳಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಮೇಲ್ನೋಟಕ್ಕೆ ಗೋವಾದಲ್ಲಿ ಮರಳು ಗಣಿಗಾರಿಕೆಗೆ ನಿಷೇಧವಿದ್ದರೂ ಕೂಡ ಯಥೇಚ್ಛವಾಗಿ ಮರಣು ಧಂಧೆ ನಡೆಯುತ್ತಿರುವುದು ಕಂಡುಬಂದಿದೆ. ಈ ಅಕ್ರಮದ ವಿರುದ್ಧ ಸರ್ಕಾರ ಯಾವಾಗ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.(Apparently, even though there is a ban on sand mining in Goa, there is a lot of sand mining going on. It remains to be seen when the government will take action against this illegality.).