ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ “ತುಳು ಕೂಟ ಗೋವಾ” ಇದರ ಉಧ್ಘಾಟನಾ ಸಮಾರಂಭ ಅಕ್ಟೋಬರ್ 20 ರಂದು ಪರ್ವರಿಯ ಪುಂಡಲೀಕ ದೇವಸ್ಥಾನದಲ್ಲಿ ನಡೆಯಲಿದೆ. ಈ ಉಧ್ಘಾಟನಾ ಸಮಾರಂಭದ ಗೌರವ ಅತಿಥಿಗಳಾಗಿ ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಯವರನ್ನು ಆಮಂತ್ರಿಸಲಾಯಿತು.(Goa State Tourism Minister Rohan Khaunte was invited as guest of honour).
ಗುರುವಾರ ಗೋವಾದ ತುಳು ಕೂಟದ ಅಧ್ಯಕ್ಷ ಗಣೇಶ ಶೆಟ್ಟಿ ಇರವತ್ತೂರ್, ಹೊಟೆಲ್ ಉದ್ಯಮಿಗಳಾದ ಜಗದೀಶ ಶೆಟ್ಟಿ, ಪರ್ವರಿ ಬಿಜೆಪಿ ಪ್ರಮುಖರಾದ ಅಶೋಕ ಶೆಟ್ಟಿ ರವರು ಸಚಿವ ರೋಹನ್ ಖಂವಟೆ ರವರ ಕಛೇರಿಗೆ ತೆರಳಿ ಅವರನ್ನು ಸಮಾರಂಭಕ್ಕೆ ಆಮಂತ್ರಿಸಿದರು.
ಗೋವಾದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ “ತುಳು ಕೂಟ ಗೋವಾ” ಅಕ್ಟೋಬರ್ 20 ರಂದು ಮಧ್ಯಾನ್ಹ 2.30 ಕ್ಕೆ ಗೋವಾ ರಾಜಧಾನಿ ಪಣಜಿ ಸಮೀಪದ ಪರ್ವರಿಯ ಪುಂಡಲೀಕ ದೇವಸ್ಥಾನದ ಸಭಾಗೃಹದಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಕರ್ನಾಟಕದಿಂದಲೂ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ.
(The newly established “Tulu Kuta Goa” in Goa will be held on October 20 at 2.30 pm at the Pundalik temple hall in Parvari near Panaji, the capital of Goa. Dignitaries from Karnataka will also attend this ceremony).