ಮಹಿಳೆಯೊಬ್ಬಳಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪ.ಪಂ ಸದಸ್ಯರೊಬ್ಬರ ವಿರುದ್ಧ   ಯಲ್ಲಾಪುರ ಠಾಣೆಯಲ್ಲಿ ಬುಧವಾರ ರಾತ್ರಿ ಪ್ರಕರಣ ದಾಖಲಾಗಿದೆ.
ರೀಯಲ್ ಎಸ್ಟೆಟ್ ಉದ್ಯಮಿ ಪ.ಪಂ ಹಾಲಿ  ಸದಸ್ಯ ಕೈಸರ್ ಸೈಯ್ಯದ್ ಅಲಿ ಉದ್ಯಮನಗರದ ಸಾರ್ವಜನಿಕ ದಾರಿ ಸ.ನಂ 4ಎ1ಎ1ಎ1 ನೇದಕ್ಕೆ ಸಂಬಂಧಿಸಿದಂತೆ ತಕರಾರಿದ್ದು, ಈ ವಿವಾದಿತ ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಿದ್ದಾನೆ. ಈ ವಿಷಯವನ್ನು ಹಸನ್ ಸಾಬ ಕಾನಳ್ಳಿ ಎಂಬವರು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಸುಟ್ಟು ಬಿಡುತ್ತೇನೆಂದು ಜೀವ ಬೆದರಿಕೆ ಹಾಕಿದ ಕುರಿತು ಬಿಬಿ ಆಯಿಷಾ ಶೇಖ್ ದೂರು ನೀಡಿದ್ದಾರೆ.‌ ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇತ್ತೀಚೆಗೆ ಇನ್ನೋರ್ವ ಸದಸ್ಯ ಸೋಮು ನಾಯ್ಕ್ ಮೇಲೆ ಪೋಲಿಸರೇ ಸೊಮೊಟೋ ಪ್ರಕರಣ ಧಾಖಲಿಸಿದ್ದರೆ ಈ ಸದಸ್ಯರ ಮೇಲೆ  ಮಹಿಳೆಯೊಬ್ಬಳು ಜೀವಬೆದರಿಕೆಯ ಪ್ರಕರಣ ದಾಖಲಿಸುವ ಮೂಲಕ ಸಧ್ಯ  ಪೋಲಿಸ್ ಪ್ರಕರಣ ದಾಖಲಾದ ಸದಸ್ಯ ಬಲ ಎರಡಕ್ಕೇರಿದೆ.