ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ – ಅಂತರಾಷ್ಟ್ರೀಯ ಯೋಗ ಗುರುಗಳು ಶಾಂತಿದೂತರು ಆಗಿರುವ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿಯವರು ತಮ್ಮ ಎಪ್ಪತ್ತನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಯೋಗ ಕ್ಷೇತ್ರ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದು, ಯಲ್ಲಾಪುರದ ದತ್ತಾತ್ರೇಯ ಗಾಂವ್ಕಾರ್ ಚಿಟ್ಟೆಪಾಲ್, ಸುಬ್ರಾಯ ಭಟ್ಟ ಆನೇಜಡ್ಡಿ ಹಾಗೂ ಶೈಲಶ್ರೀ ಉಮಾಮಹೇಶ್ವರ ಭಟ್ಟ N.T.Co ಇವರನ್ನು ಸನ್ಮಾನಿಸಿದರು.

ಶ್ರೀ ದತ್ತಾತ್ರೇಯ ಗಾಂವ್ಕಾರ್ ಚಿಟ್ಟೆಪಾಲ್ 25 ವರ್ಷಗಳಿಂದ ಸಂಗೀತ ಸೇವೆ ವಿಶೇಷವಾಗಿ ಮಕ್ಕಳಿಗೆ ಪ್ರಾಥಮಿಕ ಹಂತದ ಕಲಿಸುವಿಕೆಯಲ್ಲಿ ತೊಡಗಿದ್ದು, ಧಾರವಾಡದ ಮಕ್ಕಳ ಅಕಾಡೆಮಿಯಿಂದ ಬಾಲದೀಪ ಪ್ರಶಸ್ತಿಗೆ ಹಾಗೂ ಬಂಗಾರಮಕ್ಕಿಯವರು ನೀಡಿದ ಜಾನಪದ ಪ್ರಶಸ್ತಿಗೆ ಭಾಜನರಾಗಿದ್ದ ಇವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಿದ್ದಾರೆ.
ಪ್ರಾಥಮಿಕ ಶಾಲೆ ಹುಟಕಮನೆಯ ಶಿಕ್ಷಕ ಶ್ರೀ ಸುಬ್ರಾಯ ಭಟ್ಟ ಆನೇಜಡ್ಡಿಯವರು 16 ವರ್ಷಗಳಿಂದ ಯೋಗಸೇವೆ ಹಾಗೂ ಯೋಗ ಸಾಧನೆಯಲ್ಲಿ ತೊಡಗಿದ್ದು ರಾಷ್ಟ್ರಮಟ್ಟದ ಯೋಗಪಟುವಾಗಿರುವ ಇವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಿದ್ದಾರೆ.

ಶ್ರೀಮತಿ ಶೈಲಶ್ರೀ ಉಮಾಮಹೇಶ್ವರ ಭಟ್ಟ N.T.Co ರವರು ಕಳೆದ 12 ವರ್ಷಗಳಿಂದ ಪತಂಜಲಿಯ ಮಹಿಳಾ ಪ್ರಭಾರಿಯಾಗಿ ಯೋಗ ಸಂಘಟನೆಯಲ್ಲಿ ಸದಾ ತೊಡಗಿಸಿಕೊಂಡಿದ್ದು, ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ವಿಶ್ವದರ್ಶನ ಶಿಕ್ಷಣ ಸಮಿತಿಯ ಪ್ರಾರಂಭಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವುದು, ಶ್ರೀ ಸ್ವರ್ಣವಲ್ಲಿ ಮಹಾ ಸಂಸ್ಥಾನದ ನಗರಭಾಗಿ ಮಾತೃಮಂಡಳಿಯ ಅಧ್ಯಕ್ಷರಾಗಿ ಸೇವೆ, ಮುಂತಾದವುಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಿದ್ದಾರೆ.
ಈ ಪ್ರಶಸ್ತಿ ಪ್ರಧಾನ ಸಮಾರಂಭ 20-02-2026 ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್ ಗುರೂಜಿಯವರ ಆಶ್ರಮದಲ್ಲಿ ನಡೆಯಿತು
