ಕುಂದಗೋಳ: ಕರ್ನಾಟಕ ಪೌರಸಬೆಗಳ ಚುನಾವಣೆ ನಿಯಮಗಳು 2024 ರ ಕರಡು ಅಧಿಸೂಚನೆಯನ್ನು ಜುಲೈ 12 ರಂದು ಕರ್ನಾಟಕ ವಿಷೇಶ ಪತ್ರದಲ್ಲಿ ಪ್ರಕಟಿಸಿತ್ತು. ಇದರಲ್ಲಿ ಕುಂದಗೋಳ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ 02 ಸ್ಥಾನಕ್ಕೆ “ಸಾಮಾನ್ಯ” ಮೀಸಲಾತಿಯನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಪಟ್ಟಣ ಸದಸ್ಯ ಬಸವರಾಜ ಹನಮಂತಪ್ಪ ತಳವಾರ ನಮ್ಮ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಕಟಿಸಬೇಕೆಂದು ಧಾರವಾಡ ಉಚ್ಚನ್ಯಾಯಾಲಯದಲ್ಲಿ ಪಿಟಿಶನ್ ಸಲ್ಲಿಸಿದ್ದರು. ಇದರಿಂದ ಉಚ್ಚನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಎಂದು ಪ ಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಹೇಳಿದರು.
   ಅವರು ಗುರುವಾರದಂದು ಮಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಯಲ್ಲಿ ಮಾತನಾಡಿ,  ಕುಂದಗೋಳ ಪಟ್ಟಣ ಪಂಚಾಯಿತಿ ಆರಂಭ ದಿನಳಿಂದ‌ 1995 ರಿಂದ ಇಲ್ಲಿಯವರೆಗೆ ಎಲ್ಲಾ ಜನಾಂಗದವರಿಗೆ ಮೀಸಲಾತಿ ಪ್ರಕಟಿಸಿದೆ. ಆದರೆ ಪರಿಶಿಷ್ಟ ಪಂಗಡಕ್ಕೆ ಒಂದು ಬಾರಿಯು ಮೀಸಲಾತಿ ಪ್ರಕಟಿಸಿರುವದಿಲ್ಲ. ಮೀಸಲಾತಿ ಪ್ರಕಟಣೆ ಗಮನಿಸಿದ ಪಟ್ಟಣ ಪಂಚಾಯಿತಿ ಸದಸ್ಯರಾದ ಬಸವರಾಜ, ಹನಮಂತಪ್ಪ, ತಳವಾರ ಇವರು ನಮ್ಮ ಜನಾಂಗಕ್ಕೆ ಒಂದು ಬಾರಿಯು ಮೀಸಲಾತಿ ಸಿಕ್ಕಿರುವದಿಲ್ಲ ಎಂದು ಹೇಳಿ ಉಚ್ಚನ್ಯಾಯಾಲ ಧಾರವಾಡ ಇವರಲ್ಲಿ ಆಗಷ್ಟ್ 13 ರಂದು ರೀಟ್ ಪಿಟಿಶನ್ ಹಾಕಿದ್ದು.
    ಇದನ್ನು ಗಮನಿದ ಉಚ್ಚ ನ್ಯಾಯಾಲಯವು ಪಿಟಿಶನ್ ನಂ 104830/ of 2024/(LB-RE S) ರ ಅನ್ವಯ ಆಗಷ್ಟ್ 28 ರ ವರಗೆ  ತಡಯಾಜ್ಞೆ ನೀಡಿದೆ. ಇದರಿಂದ ಸರ್ವ ಜನಾಂಗದ ಶಾಂತಿಯ ತೋಟ ಎಂಬತೆ, ಪರಿಶಿಷ್ಟ ಪಂಗಡ ಜನಾಂಗವು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು. ಅವರಿಗೂ ಸಹ ಮೀಸಲಾತಿ ಸಿಗಲಿ ಎಂಬ ಭರವಸೆ ಇದೆ ಹಾಗೂ ಅಧಿಕಾರ ಎಲ್ಲರಿಗೂ ಮಿಸಲಾಗಬೇಕು ಅದಕ್ಕೆ ತಕ್ಕಂತೆ ಆ ಜನಾಗಂಕ್ಕೆ ಸಹ ಮೀಸಲಾತಿಯನ್ನು ಮಾನ್ಯ ಉಚ್ಚನ್ಯಾಯಾಲವು ಎಲ್ಲವನ್ನೂ ಗಮನಿಸಿ  ಇದನ್ನು ಸರಿ ಪಡಿಸಿ ನಮಗೆ ಮೀಸಲಾತಿ ಕೊಡಬಹುದು ಎಂಬ ನೀರಿಕ್ಷೆ ಇದೆ. ಎಂದು ಹೇಳಿದರು.
    ನಂತರ ಪ ಪಂ ಸದಸ್ಯ ಬಸವರಾಜ ತಳವಾರ ಮಾತನಾಡಿ,  ಮಾನ್ಯ ಉಚ್ಚನ್ಯಾಯಾಲವು ಸದ್ಯದ ಮಟ್ಟಿಗೆ ತಡೆಯಾಜ್ಞೆ ನೀಡಿದ್ದು. ಸಂತಸ ತಂದಿದ್ದು. ಪಟ್ಟಣದಲ್ಲಿ ನಮ್ಮ ಜನಾಂಗವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು. ಮುಂದೆ ನಮ್ಮ ಪರಿಶಿಷ್ಟ ಪಂಗಡಕ್ಕೆ ಉಚ್ಚನ್ಯಾಯಾಲವು ಮುಂದೆ ನಮಗೆ ಮಿಸಲಾತಿ ಪ್ರಕಟಿಸಬಹುದೆಂಬ ನಿರೀಕ್ಷೆ ಎಂದು ಹೇಳಿದರು.
   ನಂತರ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಮಿಸಲಾತಿ ಪ್ರಕಟವಾಗಿದ್ದು. ಆದರೆ‌ ಇಲ್ಲಿಯ ವರೆಗೆ ಪರಿಶಿಷ್ಟ ಪಂಗಡ ಗಮನಿಸಿದೆ ಚುನಾವಣಾ ಆಯೋಗವು ಮಿಸಲಾತಿ ಪ್ರಕಟಿಸಿದೆ, ಇದರಿಂದ ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಮಾಡಿದಂತಾಗಿದೆ. ಮುಂದೆಯಾದರೂ ಗಮನಿಸಿ ಮಿಸಲಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಮಿಸಲಿಡಬೇಕೆಂದು ಹೇಳಿದರು.
  ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಸಲೀಂ ಕ್ಯಾಲಕೊಂಡ, ಅಡಿವೇಪ್ಪ ಬಂಡಿವಾಡ, ಸಂತೋಷ ಕೋರಿ, ಸೇರಿದಂತೆ ಅನೇಕರಿದ್ದರು.