ಸುದ್ಧಿಕನ್ನಡ ವಾರ್ತೆ
Goa: ಗೋವಾದ ಮಡಗಾಂವನ ಪಂಚರತ್ನ ಸಂಕೀರ್ಣದಲ್ಲಿರುವ ಡಾ. ಗೋಡಶೆ ರವರು ವಾಸಿಸುತ್ತಿರುವ ಪ್ಲ್ಯಾಟ್ ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಫ್ಲಾಟ್ ಮಾಲೀಕರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿದ್ದ ಟಿವಿ, ಫ್ರಿಡ್ಜ್ ಹಾಗೂ ಕೆಲವು ಪುಸ್ತಕಗಳು ಸುಟ್ಟು ಕರಕಲಾಗಿವೆ. ಮಡಗಾಂವ್ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಡಗಾಂವ್‍ನ ಪಂಚರತ್ನ ಕಾಂಪ್ಲೆಕ್ಸ್‍ನ ಎರಡನೇ ಮಹಡಿಯಲ್ಲಿ ಡಾ. ಗೋಡಶೆ ರವರ ಡೆಂಟಲ್ ಕ್ಲಿನಿಕ್ ಹೊಂದಿದೆ. ಅವರು ಅದರ ಸಮೀಪವಿರುವ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದಾರೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಡಾ. ಗೋಡಶೆ ರವರ ಫ್ಲಾಟ್‍ನಿಂದ ಹೊಗೆ ಬರಲಾರಂಭಿಸಿತು. ಕಟ್ಟಡದ ನಿವಾಸಿಗಳು ಬೆಂಕಿ ಹೊಗೆ ಕಂಡ ತಕ್ಷಣ ಮಡಗಾಂವ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಪಕ್ಕದ ಫ್ಲಾಟ್‍ದಾರರು ಗೋಡಶೆ ರವರನ್ನು ಸಂಪರ್ಕಿಸಿದರು. ಮಡಗಾಂವ್ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಫ್ಲಾಟ್ ನಲ್ಲಿದ್ದ ಫ್ರಿಡ್ಜ್, ಟೆಲಿವಿಷನ್ ಮತ್ತಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.