ಸುದ್ಧಿಕನ್ನಡ ವಾರ್ತೆ
Goa: ಗೋವಾದ ಮಾಪ್ಸಾ (MAPUSA)ಉಪ ವಿಭಾಗೀಯ ಪೋಲಿಸ್ ಕಛೇರಿ ವ್ಯಾಪ್ತಿಯಲ್ಲಿ ಬರುವ ಪೋಲಿಸ್ ಠಾಣೆಗಳ ಕಾರುಗಳ ಇಂಧನದ ಬಿಲ್ ಗಳನ್ನು ಲೆಕ್ಕಪತ್ರ ನಿರ್ದೇಶನಾಲಯ ಸಮ್ಮತಿ ನೀಡಿಲ್ಲ ಎನ್ನಲಾಗಿದೆ. ಇಂಧನದ ಬಿಲ್ ಸುಮಾರು 20 ಲಕ್ಷ ರೂ ಬಾಕಿ ಉಳಿದಿದ್ದು, ಬಿಲ್ ಚುಕ್ತಾ ಆಗದ ಕಾರಣ ಪೆಟ್ರೋಲ್ ಪಂಪ್ ಮಾಲೀಕರು ಈ ಭಾಗದ ಪೋಲಿಸ್ ಠಾಣೆಯ ವಾಹನಗಳಿಗೆ ಇಂಧನ ಪೂರೈಕೆ ನಿಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಇದರಿಂದಾಗಿ ಮಾಪ್ಸಾ ಭಾಗದ ಪೋಲಿಸ್ ವಾಹನಗಳು ಇಂಧನವಿಲ್ಲದೆಯೇ ನಿಲ್ಲುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಾಪ್ಸಾ (MAPUSA) ಪೋಲಿಸ್ ಉಪವಿಭಾಗೀಯ ಕಛೇರಿಯ ಪೋಲಿಸ್ ವಾಹನಗಳಿಗೆ ಬುರ್ಯೆ ಪೆಟ್ರೋಲ್ ಪಂಪ್ ಮೂಲಕ ಡೀಸೆಲ್ ಮತ್ತು ಪೆಟ್ರೋಲ್ ಇಂಧನ ಪೂರೈಕೆ ಮಾಡಲಾಗುತ್ತದೆ. ಇದರಿಂದಾಗಿ ಮಾಪ್ಸಾ, ಹಣಜುಣ, ಕೋಲ್ವಾಳ ಜೊತೆಗೆ ಮಾಪ್ಸಾ ಉಪವಿಭಾಗೀಯ ಪೋಲಿಸ್ ಠಾಣೆಯ ವಾಹನಗಳು ಮತ್ತು ಹಣಜುಣ ಟ್ರಾಫಿಕ್ ಪೋಲಿಸ್ ಸೆಲ್ ವಾಹನಗಳು ಇಂಧನವಿಲ್ಲದೆಯೇ ನಿಲ್ಲುವ ಆತಂಕದಲ್ಲಿದೆ ಎನ್ನಲಾಗಿದೆ.

ಈ ಇಂಧನದ ಬಿಲ್ ಮಂಜೂರು ಮಾಡಲು ಲೆಕ್ಕಪತ್ರ ನಿರ್ದೇಶನಾಲಯ ನಿರಾಕರಿಸಿದೆ ಎನ್ನಲಾಗಿದೆ. ಕಳೆದ ಸುಮಾರು 5 ತಿಂಗಳಿಂದ ಪೆಟ್ರೋಲ್ ಡಿಸೇಲ್ ಬಿಲ್ ಬಾಕಿ ಉಳಿದುಕೊಂಡಿದ್ದು, ಬಿಲ್ ಮೊತ್ತ ಸುಮಾರು 20 ಲಕ್ಷ ರೂಗಳಾಗಿದೆ ಎನ್ನಲಾಗಿದೆ.