ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ : ಭಗವಂತ ನಮಗೆ ನೀಡಿರುವುದರಲ್ಲಿಯೇ ಒಂದು ಭಾಗವನ್ನು ಸಮಾಜಕ್ಕೆ ನೀಡಿದರೆ ಜೀವನ ಸಾರ್ಥಕವಾಗುತ್ತದೆ
ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತ ಮೂರ್ತಿ ಹೆಗಡೆ ಹೇಳಿದರು.

ತಾಲೂಕಿನ ಮಳವಳ್ಳಿ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ದೇಣಿಗೆಯಾಗಿ ನೀಡಿ ಮಾತನಾಡಿದರು. ಇದುವರೆಗೂ ನಾವು ಹಲವಾರು ಶಾಲೆಗಳಿಗೆ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಿದ್ದೇವೆ. ಸಮಾಜ ಸೇವೆ ಮಾಡುವುದು ನಮ್ಮ ಪುಣ್ಯ. ಸಮಾಜ ಸೇವೆಗೆ ನಾವು ಸಿದ್ಧಗಂಗಾ ಮಠದ ಶ್ರೀ ಗಳ ಪ್ರೇರೇಪಣೆಯನ್ನು ಪಡೆದು ಮಾಡುತ್ತಿದ್ದೇವೆ. ಶ್ರೀ ಶಿವಕುಮಾರ್ ಸ್ವಾಮೀಜಿಗಳು ತ್ರಿವಿಧ ದಾಸೋಹ ಮಾಡುತ್ತ ಹಲವಾರು ಮಕ್ಕಳಿಗೆ ವಿದ್ಯೆ, ವಸತಿಯನ್ನು ಕಲ್ಪಿಸಿ ಕೊಟ್ಟಿದ್ದಾರೆ, ಇವತ್ತು ಅವರ ಹತ್ತಿರ ಕಲಿತ ಮಕ್ಕಳು ದೇಶ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಪ್ರೇರಣೆ ಯಾಗಿ ತೆಗೆದುಕೊಂಡು ಸಮಾಜಮುಖಿ ಕೆಲಸವನ್ನ ಮಾಡುತ್ತಿದ್ದೇವೆ.
ದಾನ ಮಾಡಿದಾಗ ಸಮಾಜದಲ್ಲಿ ಕೆಲವರು ದುಡ್ಡು ಹೆಚ್ಚಿದೆ ಹಾಗಾಗಿ ದಾನ ಮಾಡುತ್ತಾರೆ ಎನ್ನುತ್ತಾರೆ. ದಾನ ಮಾಡಿಲ್ಲ ಅಂದಾಗ ತುಂಬಾ ಜಿಪುಣ ಎನ್ನುತ್ತಾರೆ. ಆಗ ನಮಗೆ ಯಾವ ಕೆಲಸಕ್ಕೆ ದುಡ್ಡು ಕೊಡಬೇಕು ಎನ್ನುವ ಜಿಜ್ಞಾಸೆ ಶುರು ಆಗುತ್ತದೆ. ನಾನು ಇಲ್ಲಿ ಯಾವುದೋ ಕಾರ್ಯ ಸಾಧನೆಯ ಉದ್ದೇಶದಿಂದ ನಾನು ದಾನ ಮಾಡುತ್ತಿಲ್ಲ. ಸಮಾಜಕ್ಕೆ, ಅಗತ್ಯ ಇರುವವರಿಗೆ ಒಳ್ಳೆಯದಾಗಲಿ ಎಂದಷ್ಟೇ ದಾನ ಮಾಡುತ್ತೇನೆ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಅನಂತ ಮೂರ್ತಿ ಹೆಗಡೆ ಯವರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರಾಘ ವೇಂದ್ರ ಭಟ್ , ಸುಬ್ಬಣ್ಣ ಕುಂಟ್ಗೆರೆ , ರವಿ ಹುಣಸಿ ,ರಾಘವೇ೦ದ್ರ ಸ್ವಾಮಿಕೇರಿ , ಸವಿತಾ ಪೂಜಾರಿ , ದೀಪಕ್ ಭಟ್ , ಸಂತೋಷ್ ಕೊಳಗೇರಿ , ನರಸಿಂಹ ಭಟ್ , ಆದರ್ಶ್ ಭಟ್, ಏನ್ ವಿ ಭಟ್ , ಜಾಹ್ನವಿ ಕೊಣಬಿ ಉಪಸ್ಥಿತರಿದ್ದರು.