ಸುದ್ಧಿಕನ್ನಡ ವಾರ್ತೆ
Goa: ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದ ಸರ್ಕಾರ ಬಗೋವಾದಲ್ಲಿ ಅತಿಕ್ರಮಣಗಳ ತೆರವಿಗೆ ಮುಂದಾಗಿದೆ. ಗೋವಾದ ಮಾಪ್ಸಾ ಹೌಸಿಂಗ್ ಬೋರ್ಡನಲ್ಲಿ ನಿರ್ಮಿಸಿದ್ದ 6 ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿದೆ. ಅತಿಕ್ರಮಣ ಮಾಡಿದರೆ ಇನ್ನು ಮುಂದೆ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ಗೋವಾ ಸರ್ಕಾರ ನೀಡಿದೆ.

ಸಿದ್ಧಿಕಿ ಉರ್ಫ ಸುಲೇಮಾನ್ ಖಾನ್ ಎಂಬುವವರಿಗೆ ಸೇರಿದ್ದ ಈ ಅಕ್ರಮ ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಏಕತಾ ನಗರದಲ್ಲಿ ಸುಮಾರು 20,819 ಚೌ.ಮೀಟರ್ ಜಾಗವನ್ನು ರಬ್ಬರ್ ಸ್ಟಾಂಪ್ ಬಳಸಿ ನಕಲಿ ಕಾಗದಪತ್ರ ಸೃಷ್ಠಿಸಿ ಈ ಜಮೀನನ್ನು ತಮ್ಮ ಹೆಸರಿನಲ್ಲಿ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಿಕಿ ಉರ್ಫ ಸುಲೇಮಾನ್ ಖಾನ್ ಹಾಗೂ ಇತರರ ವಿರುದ್ಧ ಮಾಪ್ಸಾ ಪೋಲಿಸರು 2020 ರಲ್ಲಿ ಭಾರತೀಯ ದಂಡಸಂಹಿತೆ ಖಾಯ್ದೆ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ಶೇಟಯೆ ಎಂಬುವರು ದೂರು ಕೂಡ ದಾಖಲಿಸಿದ್ದರು.