ಸುದ್ಧಿಕನ್ನಡ ವಾರ್ತೆ
ಮುಂಬಯಿ: ಆರ್ಥಿಕ ಬೆಳವಳಿಗೆ ಹಾಗೂ ಜಾಗತಿಕ ಬೆಳವಣಿಗೆಯ ನಿರೀಕ್ಷೆಯ ಆರ್ಥಿಕ ಭರವಸೆಯ ನಡುವೆಯೂ ಮುಂಬಯಿ ಷೇರುಪೇಟೆ ಸೂಚ್ಯಂಕ ಹಾಗೂ ನಿಪ್ಟಿ ಶುಕ್ರವಾರ 500 ಕ್ಕೂ ಅಧಿಕ ಅಂಶಗಳ ಭಾರಿ ಕುಸಿತಕಂಡಿದ್ದು ಹೂಡಿಕೆದಾರರು ಭಾರಿ ನಷ್ಠ ಅನುಭವಿಸುವಂತಾಗಿದೆ. ನಿರಂತರವಾಗಿ ಭಾರಿ ಏರಿಕೆ ಕಂಡಿದ್ದ ಬೆಳ್ಳಿ ದರ ಶುಕ್ರವಾರ 15,000 ರೂ ಇಳಿಕೆಯಾಗುವ ಮೂಲಕ ದೂಡಿಕೆದಾರರಿಗೆ ಭಾರಿ ನಷ್ಟ ಉಂಟಾಗುವಂತಾಗಿದೆ.
ಶುಕ್ರವಾರ ಷೇರು ಪೇಟೆ ಆರಂಭಿಕ ಸೂಚ್ಯಂಕ 516.43 ಅಂಶಗಳ ಕುಸಿತದೊಂದಿಗೆ 82,049.94 ಅಂಕಗಳಲ್ಲಿ ವಹಿವಾಟು ಆರಂಭಿಸಿದೆ. ಷೇರುಪೇಟೆ ಬೆಳಿಗ್ಗೆ 11 ಗಂಟೆಯ ವಹಿವಾಟಿನಲ್ಲಿ ಸಂವೇದಿ ಸೂಷ್ಯಂಕವು 338.31 ಅಂಕಗಳಷ್ಟು ಇಳಿಕೆಯೊಂದಿಗೆ 82,228.06 ಅಂಕಗಳ ಮಟ್ಟ ತಲುಪಿದೆ. ಎನ್ ಎಸ್ ಇ ನಿಪ್ಟಿ 110.25 ಅಂಕಗಳ ಇಳಿಕೆಯೊಂದಿಗೆ 25,308.65 ಅಂಕಗಳ ಮಟ್ಟ ತಲುಪಿದೆ.
ಶುಕ್ರವಾರ ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯು 1 ಗ್ರಾಂ ಗೆ 395 ರೂ ಆಗಿದೆ. ಒಂದು ಕೆಜಿ ಬೆಳ್ಳಿಯು 3,95000 ರೂ ಆಗಿದೆ. ಗುರುವಾರಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆಯು ಪ್ರತಿ ಗ್ರಾಂ ಗೆ 15 ರೂ ಹಾಗೂ ಪ್ರತಿ ಕೆಜಿಗೆ ಬರೊಬ್ಬರಿ 15,000 ರೂ ಇಳಿಕೆಯಾಗಿದೆ.
