ಸುದ್ದಿ ಕನ್ನಡ ವಾರ್ತೆ
ಕುಮಟಾ: ತಾಲೂಕಿನ ಹಾಲಕ್ಕಿ ಯೂತ್ ಕ್ಲಬ್ (ರಿ) ಉತ್ತರ ಕನ್ನಡ ಇವರ ಆಶ್ರಯದಲ್ಲಿ ನಡೆದ ಹಾಲಕ್ಕಿ ಸಾಂಸ್ಕೃತಿಕ ಸಂಭ್ರಮ 2026 ರ ಕುಮಟಾ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಜಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಆದಿಚುಂಚನಗಿರಿಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಿರ್ಜಾನ ಶಾಖಾ ಮಠದ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮೀಜಿ ಹಾಗೂ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಅಂಕೋಲಾದ ಗುರುರಾಜ್ ಸಾತು ಗೌಡ ಡಿ.ಆರ್. ಎಫ್. ಒ (ಜೋಯಿಡಾ,ಅಂಬೋಳಿ ಬೀಟ್) ಇವರಿಗೆ
2026 ನೇಯ ಸಾಲಿನ ” ವೃಕ್ಷ ರತ್ನ ತುಳಸಿ ಪ್ರಶಸ್ತಿ 2026 “ಪ್ರಧಾನ ಮಾಡಲಾಯಿತು.