ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಅವೇಡಾ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಶಾಲೆಯ ಶಿಕ್ಷಕವೃಂದದವರು ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹದ ಕೊಡುಗೆಯಾಗಿ ನೀಡುವ ಉದ್ದೇಶದಿಂದ ಈ ವರ್ಷ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಟೈ ಮತ್ತು ಬೆಲ್ಟ್ ನೀಡಿದರು.

ಹಾಗೆಯೇ ದಾಂಡೇಲಿಯ ನಿವಾಸಿಗಳು, ಶೈಕ್ಷಣಿಕ ಅಭಿಮಾನಿಗಳು, ದಾನಿಗಳು ಆದ ದಿಲ್ವಾರ ಭಾಷರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್,ಕಂಪಾಸ್,ಪೆನ್ನುಗಳನ್ನು ಅವೇಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ಭಗವತಿರಾಜ್ ಜೊತೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವೇಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ಭಗವತಿರಾಜ್ ರವರು ಮಕ್ಕಳು ಕಲಿಕಾ ಸಾಮಗ್ರಿಗಳನ್ನು ಸರಿಯಾಗಿ ಉಪಯೋಗಿಸಿ, ಉತ್ತಮ ಶಿಕ್ಷಣ ಪಡೆದು,ಉತ್ತಮ ಸಾಧನೆ ಮಾಡಿ ತೋರಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ರೋಹಿದಾಸ ಮಡಿವಾಳ,ಸಹ ಶಿಕ್ಷಕಿಯರಾದ ಉಷಾ ಜೋಶಿ,ದೀಪಾ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ, ನಿರೂಪಣೆ, ವಂದನೆಯನ್ನು ಸಹ ಶಿಕ್ಷಕಿಯಾದ ದೀಪಾ ನಾಯ್ಕ ನಿರ್ವಹಿಸಿದರು. ಶಾಲೆಯ ಎಸ್ ಡಿ ಎಂ ಸಿ,ಪಾಲಕರ, ಪೋಷಕರ,ಮಕ್ಕಳ ಪರವಾಗಿ ಶಿಕ್ಷಕ ವೃಂದದವರಿಗೆ, ದಾನಿಗಳಿಗೆ ಮುಖ್ಯ ಶಿಕ್ಷಕರಾದ ರೋಹಿದಾಸ ಮಡಿವಾಳ ಅಭಿನಂದನೆಗಳನ್ನು ಸಲ್ಲಿಸಿದರು.