ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಶಿವಶರಣರ ಪ್ರಸಿದ್ಧ ಪುಣ್ಯ ಕ್ಷೇತ್ರ,ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಉಳವಿಯ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ರಥಸಪ್ತಮಿಯ ದಿನ ಚಾಲನೆಯನ್ನು ನೀಡಲಾಗಿದೆ.

ಜಾತ್ರೆಯ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಲಂಕೃತ ಚಕ್ಕಡಿಗಳ ಮೂಲಕ ದೇವರ ದರ್ಶನ,ತಮ್ಮ ಎತ್ತುಗಳಿಗೆ ದೇವರ ಆಶೀರ್ವಾದ ,ದರ್ಶನ ಭಾಗ್ಯ ಪಡೆಯಲು ತಮ್ಮ ತಮ್ಮ ಊರುಗಳಿಂದ,ತಮ್ಮ ದಿನನಿತ್ಯಕ್ಕೆ ಬೇಕಾಗುವ ಬಟ್ಟೆ,ಆಹಾರ ವಸ್ತುಗಳ ಜೊತೆ ಹೊರಟಿರುತ್ತಾರೆ. ದಾರಿಯ ಮಧ್ಯದಲ್ಲಿ ಅಲ್ಲಲ್ಲಿ ನೀರು ಇರುವ ಜಾಗದಲ್ಲಿ ವಿಶ್ರಾಂತಿ,ಸ್ನಾನ, ಆಹಾರ ಸೇವನೆ ಇತ್ಯಾದಿಗಳ ಜೊತೆ ಹರಹರ ಮಹಾದೇವ, ಅಡಿಕೇಶ್ವರ, ಮಡಿಕೇಶ್ವರ ಉಳವಿ ಚನ್ನಬಸವೇಶ್ವರ ಎಂದು ಹೇಳುತ್ತಾ ತಮ್ಮ ಅಲಂಕೃತ ಚಕ್ಕಡಿಗಳೊಂದಿಗೆ ಉಳವಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಚಕ್ಕಡಿ ಗಾಡಿಗಳ ಸುಗಮ ಸಂಚಾರದ ದೃಷ್ಟಿಯಿಂದ ಅರಣ್ಯ ಇಲಾಖೆಯವರು,ಆರಕ್ಷಕ ಇಲಾಖೆಯವರು ವೀಕ್ಷಣೆ ಮಾಡುತ್ತಿದ್ದಾರೆ. ಬಂಡಿಯ ಎತ್ತುಗಳಿಗೆ ಸೂಕ್ತ ನೀರಿನ,ಆಹಾರದ,ವಿಶ್ರಾಂತಿಯ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ,ವಾಹನ ಸವಾರರಿಗೂ ತೊಂದರೆಯನ್ನುಂಟು ಮಾಡಕೊಳ್ಳದೇ ಸುರಕ್ಷತೆ ದೃಷ್ಟಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂಬುದು ಎಲ್ಲರ ಆಶಯವಾಗಿದೆ.