ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಹಾಸಣಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನಳ್ಳಿಯಲ್ಲಿ ಮನೆ ಬಳಿಯೇ ಹಸುವನ್ನು ಹುಲಿ ಹಿಡಿದು ತಿಂದು ಹಾಕಿದ ಘಟನೆ ನಡೆದಿದೆ.
ದೇವರಕಲ್ಲಳ್ಳಿಯ ರಮೇಶ ಎನ್ನುವವರಿಗೆ ಸೇರಿದ
ಹಸುವನ್ನು ಮೇವಿಗೆ ಬಿಟ್ಟ ಸಂದರ್ಭದಲ್ಲಿ ಹುಲಿ
ಹಿಡಿದು ತಿಂದು ಹಾಕಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮೂರು ತಿಂಗಳಿಂದೀಚೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಹದೈನೈದಕ್ಕೂ ಹೆಚ್ಚು ಹಸುಗಳನ್ನು ಹುಲಿ ಬಲಿ ಪಡೆದಿದೆ. ಹೊನ್ನಳ್ಳಿ ಶಂಭುಸಿದ್ದಿ ಎನ್ನುವವರಿಗೆ ಸೇರಿದ ಕೊಟ್ಟಿಗೆಯೇ ಹುಲಿಯ ಕಾಟದಿಂದಾಗಿ ಬರಿದಾಗಿದೆ. ಪ್ರಸ್ತುತ ದೇವರಕಲ್ಲಳ್ಳಿ ರಮೇಶ ಅವರ ಹಸುವನ್ನು ಹುಲಿ ಹಿಡಿದ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಶು ವೈದ್ಯ ಡಾ. ರಾಜೇಶ ಪಂಚನಾಮೆ ನಡೆಸಿದರು. ಹುಲಿ ದಾಳಿಯಿಂದಹಸುವನ್ನು ಕಳೆದುಕೊಂಡ ರಮೇಶ ಅವರಿಗೆ ಅರಣ್ಯ
ಇಲಾಖೆ ತಕ್ಷಣ ಪರಿಹಾರ ನೀಡಬೇಕು. ಇಂತಹ ಘಟನೆಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು
ಸಾಮಾಜಿಕ ಕಾರ್ಯಕರ್ತರಾದ ಗುರುಪ್ರಸಾದ ಭಟ್ಟ ಹೊನ್ನಳ್ಳಿ ಆಗ್ರಹಿಸಿದ್ದಾರೆ.
