ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ತೋಟಗಾರಿಕೆ ಇಲಾಖೆ ಯ ಸಂತೋಷ ಶಂಕರರಾವ ಎಬ್ಬೆಳ್ಳಿಕರ್ ಅವರಿಗೆ ಅವರ ಸೇವೆಯನ್ನು ಗುರುತಿಸಿ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ,

ಅವರು ಕರ್ನಾಟಕ ಸರಕಾರದ ನಾಗರೀಕ ಸೇವೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ನೋಡಿ ಈ ಪುರಸ್ಕಾರ ನೀಡಲಾಗಿದೆ . ಜಿಲ್ಲಾ ಆಡಳಿತ ಉತ್ತರ ಕನ್ನಡ ಜಿಲ್ಲೆ ಯು ಉತ್ತರ ಕನ್ನಡ ಜಿಲ್ಲಾ ರಾಜ್ಯ ಸರಕಾರಿ ನೌಕರರ ದಿನಾಚರಣೆಯ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿ ಗಳಾದ ಕೆ ಲಷ್ಮಿ ಪ್ರಿಯಾ ರವರು ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು,

ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಿದ್ದು ತಾಲೂಕಿನ ಜನತೆಗೆ ಸಂತಸ ತಂದಿದೆ, ಸಂತೋಷ ಎಬ್ಬೆಳ್ಳಿಕರ್ ಅವರು ತಾಲೂಕಿನಲ್ಲಿ 2023 ರಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲಾಗಿದೆ.