ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ( ನರೇಗಾ) ಯೋಜನಗೆ ಹೊಸ ಹೆಸರು ( ವಿಬಿ ಜಿ ರಾಮ್ ಜಿ / ರೋಜಗಾರ್ ಮತ್ತು ಅಜೀವಿಕಾ ಮಿಷನ್ ) ನೀಡಿ ತಿದ್ದುಪಡಿ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೋಯಿಡಾದಲ್ಲಿ ಬ್ಲಾಕ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನೆ ನಡೆಸಿ ಜೋಯಿಡಾ ತಹಶಿಲ್ದಾರ ಮಂಜುನಾಥ ಮೊನ್ನೋಳಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು‌.

ಈ ಸಂದರ್ಭದಲ್ಲಿ ಮಾತನಾಡಿದ ಜೋಯಿಡಾ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ ನರೇಗಾ ಯೋಜನೆಯಿಂದ ಬಹಳಷ್ಟು ಬಡ ಜನರಿಗೆ ಅನುಕೂಲವಾಗಿದೆ, ಈ ಯೋಜನೆ ಹೆಸರು ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ( ನರೇಗಾ ) ಎಂತಲೇ ಇರುವಂತಾಬೇಕು ಎಂದರು.
ಈ ಸಂದರ್ಭದಲ್ಲಿ ಕೆ‌.ಪಿ.ಸಿ‌ಸಿ ಸದಸ್ಯ ಸದಾನಂದ ದಬ್ಗಾರ, ಮಾಜಿ ಜಿ.ಪಂ ಸದಸ್ಯ ಸಂಜಯ ಹಣಬರ, ಕಾಂಗ್ರೆಸ್ ಪಕ್ಷದ ಅರುಣ ದೇಸಾಯಿ, ಶ್ರೀಧರ ದಬ್ಗಾರ, ಸುಕನ್ಯಾ ದೇಸಾಯಿ, ಅರುಣ ಭಗವತಿರಾಜ್, ಭವಾನಿ ಚಹ್ಹಾಣ,ವಿನಯ ದೇಸಾಯಿ, ದತ್ತಾ ನಾಯ್ಕ,ವಿಜಯ ಪಂಡಿತ್ ,ಸದಾನಂದ ಉಪಾಧ್ಯ, ಪ್ರಸನ್ನ ಗಾವಡಾ, ಮಂಜುನಾಥ ಭಾಗ್ವತ್,ಮಂಗಲಾ ಉಪಾಧ್ಯ,ಯುವ ಮುಖಂಡ ಅಕ್ಷಯ ರಾವಳ,ರತನ ಕಲಮಳಕರ ಇತರರು ಇದ್ದರು‌‌.