ಸುದ್ದಿ ಕನ್ನಡ ವಾರ್ತೆ

ಅಂಕೋಲಾ:ತಾಲೂಕಿನ ವಿಭೂತಿ ಪಾಲ್ಸ್ ನಲ್ಲಿ ನೀರಿನ ಸುಳಿಗೆ ಸಿಲುಕಿ
ಮುಳುಗಿ ಹೋಗುತ್ತಿದ್ದ ಪ್ರವಾಸಿಗನನ್ನ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಸೋಮವಾರ ತಾಲೂಕಿನ ಪ್ರವಾಸಿ ಕ್ಷೇತ್ರ ವಿಭೂತಿ ಫಾಲ್ಸ್ ನಲ್ಲಿ ನಡೆದಿದೆ.

ತಮಿಳುನಾಡು ಚೆನೈನ ಆದಿತ್ಯ ಎಂಬಾತನೆ ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಿಗ. ಇವರು ಒಟ್ಟು 40 ಯುವಕರು ಪ್ರವಾಸಕ್ಕೆ ಬಂದಿದ್ದು, ತಾಲೂಕಿನ ವಿಭೂತಿ ಫಾಲ್ಸ್ ನಲ್ಲಿ ನೀರಿಗಿಳಿದಿದ್ದರು. ಈ ವೇಳೆ ಒರ್ವ ಮುಳುಗುತ್ತಿರುವುದನ್ನ ಗಮನಿಸಿದ ಕರ್ತವ್ಯ ನಿರತ ಜೀರಕ್ಷಕ ಸಿಬ್ಬಂದಿ ವಿಜಯಕುಮಾರ ನಾಯಕ ತಕ್ಷಣ ಧಾವಿಸಿ ಹಗ್ಗ ಮತ್ತಿತರ ಪರಿಕರ ಬಳಸಿ ಹರಸಾಹಸ ಮಾಡಿ ಮೇಲಕ್ಕೆ ತಂದು ಜೀವ ಉಳಿಸಿದ್ದಾರೆ.