ಸುದ್ದಿ ಕನ್ನಡ ವಾರ್ತೆ
ಚಾಮರಾಜನಗರ: ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದ ಕಹಿ ಘಟನೆಯನ್ನು ಚಾಮರಾಜನಗರ ಜಿಲ್ಲೆಯ ಡಾ. ಬಾಬು ಜಗಜೀವನ್ ರಾಂ ಒಕ್ಕೂಟ ವತಿಯಿಂದ ಹಲ್ಲೆಗೊಳಗಾದ ಕಣ್ಣಮ್ಮ ಅವರನ್ನು ಜ.25 ರಂದು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಆರೋಗ್ಯ ವಿಚಾರಿಸುವ ಸಲುವಾಗಿ ಜಿಲ್ಲೆಯ ಮತ್ತು ತಾಲೂಕಿನ ಎಲ್ಲಾ ಪ್ರಮುಖರು ಆಸ್ಪತ್ರೆಗೆ ಭೇಟಿ ವೈದ್ಯಾಧಿಕಾರಿ ಸಮ್ಮುಖದಲ್ಲಿ ಕಣ್ಣಮ್ಮ ಅವರ ಆರೋಗ್ಯ ವಿಚಾರಿಸಲಾಯಿತು.ವೈದ್ಯರು ಇಬ್ಬರು ದೊಣ್ಣೆಗಳಿಂದ ಒಡೆದಿರುವ ವರದಿ ದಾಖಲಾಗಿರುತ್ತದೆ ಅದರ ಬಗ್ಗೆ ಈಗಾಗಲೇ ಚಿಕಿತ್ಸೆ ನೀಡುತ್ತಿದ್ದೇವೆ ಇನ್ನು ಒಂದು ವಾರಗಳ ಕಾಲ ಚಿಕಿತ್ಸೆ ಪಡೆಯುವ ಅವಶ್ಯಕತೆ ಇದೆ. ಅಲ್ಲದೆ ಈ ಸಂಬಂಧವಾಗಿ ಕಣ್ಣಮ್ಮ ಅವರಿಗೆ ಅಪರಿಚಿತ ವ್ಯಕ್ತಿ ದಮ್ಕಿ ಹಾಕಿರುವ ಮಾಹಿತಿಯು ಕಣ್ಣಮ್ಮ ಅವರು ಹೇಳಿರುತ್ತಾರೆ. ಪಕ್ಕದ ಜಮೀನಿನಲ್ಲಿ ಇರುವಂತ ಲಂಬಾಣಿ ಸಮುದಾಯದ ಓರ್ವ ರೈತನ ಕೊಲೆಯಾಗಿರುತ್ತದೆ ಅವರಿಗೆ ಆದಂತಹ ಗತಿ ನಿಮಗೂ ಸಹ ಆಗುತ್ತದೆ ಎಂದು ಅಕ್ಕಪಕ್ಕದ ಜಮೀನಿನ ಮಾಲೀಕರು ಈ ಸಂಬಂಧವಾಗಿ ಕಣ್ಣಮ್ಮಳಿಗೆ ಬೆದರಿಕೆ ಹಾಕಿರುವ ಮಾಹಿತಿಯು ಇದೆ. ಈ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಜೊತೆ ನಮ್ಮ ಒಕ್ಕೂಟದ ಮುಖಂಡರು ಚರ್ಚಿಸಿ ಕಣ್ಣುಮ್ಮ ಅವರಿಗೆ ಸೂಕ್ತಭದ್ರತೆ ಒದಗಿಸಬೇಕೆಂದು ತಿಳಿಸಿರುತ್ತೇವೆ.
ಈ ಸಂದರ್ಭದಲ್ಲಿ ಡಾ.ಬಾಬು ಜಗಜೀವನರಂ ಸಂಘಟನೆಗಳ ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷ ಬಸನಪುರ ರಾಜಶೇಖರ್, ಜಿಲ್ಲಾ ಅಧ್ಯಕ್ಷ ಎಚ್.ಎಚ್. ನಾಗರಾಜು,ಉಪಾಧ್ಯಕ್ಷರಾದ ಬಿ.ಚಾಮರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಎಂ.ಶಿವಕುಮಾರ್, ಜಿಲ್ಲಾ ಖಜಾಂಚಿ ದ್ವಾರ್ಕಿ ಬಸವರಾಜ್ ಕೊಳ್ಳೇಗಾಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಎಲ್ ಐ ಸಿ ಸಿದ್ದರಾಜು, ರಾಜಣ್ಣ,ಜಿಲ್ಲಾ ಉಪಾಧ್ಯಕ್ಷ ಚಾಮರಾಜು,ದಸಂಸ ಜಿಲ್ಲಾ ಸಂಚಾಲಕ ಬೆಳ್ಳಿಯಪ್ಪ, ಡ್ಯಾನ್ಸ್ ಬಸವರಾಜು, ಯಳಂದೂರು ತಾಲೂಕು ಅಧ್ಯಕ್ಷ ಕೆಸ್ತೂರು ಮರಪ್ಪ, ಕೊಳ್ಳೇಗಾಲ ಟೌನ್ ಯಜಮಾನ ಹನುಮಂತು, ಸಿ.ಮಾಧು, ಎಲ್ಲಮಾಳ ಮಹಾದೇವ, ಶಿವಣ್ಣ ಉಪಾದ್ಯಕ್ಷ ಬೈಲೂರು ಸುರೇಶ್, ಕೆ ಎಸ್ ಆರ್ ಟಿ ಸಿ ನಾಗರಾಜು, ಪೋಲಿಸ್ ಇಲಾಖೆ ಲಿಂಗರಾಜು,
ಪತ್ರಿಕಾ ಕಾರ್ಯದರ್ಶಿ ಚಂದ್ರು, ನಿರ್ದೇಶಕರಾದ ಶಿವಮಲ್ಲು, ಕಾಮಗೆರೆ ವೆಂಕಟೇಶ್, ಆಡಿಟರ್ ಮಾದು ಸೇರಿದಂತೆ ಇತರರು ಇದ್ದರು. ವರದಿ ಎಸ್.ಪುಟ್ಟಸ್ವಾಮಿಹೊನ್ನೂರು ಚಾಮರಾಜನಗರ ಜಿಲ್ಲೆ
